
ಯಾದಗಿರಿ: ಬೈಕ್ ಖರೀದಿಸಲು ಹಣ ಕೊಡದ ಕಾರಣ ತಂದೆಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ನಡೆದಿದೆ.
ಮಗ ಶೇಖರ್ ಕೊಲೆ ಆರೋಪಿ. ತಂದೆ ಚೆನ್ನಾರೆಡ್ಡಿ ರಾಥೋಡ್(50) ಅವರನ್ನು ಶೇಖರ್ ಕೊಲೆ ಮಾಡಿದ್ದಾನೆ. ಬೈಕ್ ತೆಗೆದುಕೊಳ್ಳಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ಕೊಲೆ ಮಾಡಿದ್ದಾನೆ. ತಂದೆಯನ್ನು ಕೊಲೆ ಮಾಡಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆಂದು ನಾಟಕವಾಡಿದ್ದಾನೆ. ಅಜ್ಜಿಯ ಜೊತೆ ಠಾಣೆಗೆ ದೂರು ಕೊಡಲು ಹೋಗಿದ್ದ ಶೇಖರ್ ಲಾಕ್ ಆಗಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೊಲೆಯಾದ ತಂದೆ ಚೆನ್ನಾ ರೆಡ್ಡಿ ಖಾತೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ಇತ್ತು. ಬೈಕ್ ತೆಗೆದುಕೊಳ್ಳಲು ತಂದೆಯ ಬಳಿ 2 ಲಕ್ಷ ಕೊಡುವಂತೆ ಶೇಖರ್ ಕೇಳಿದ್ದ. ಹಣ ಕೊಡಲ್ಲ ಎಂದಿದ್ದಕ್ಕೆ ತಂದೆಯನ್ನು ಶೇಖರ್ ಕೊಲೆ ಮಾಡಿದ್ದಾನೆ. ಮದ್ಯ ಸೇವಿಸಿ ಮಲಗಿದ್ದ ತಂದೆಯನ್ನು ತಡರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆತ್ಮಹತ್ಯೆಯ ಕತೆ ಕಟ್ಟಿದ್ದಾನೆ. ತಂದೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಹೇಳಿ ಸಂಬಂಧಿಕರನ್ನು ನಂಬಿಸಿದ್ದಾನೆ. ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ಶೇಖರ್ ಅಜ್ಜಿಯ ಜೊತೆಗೆ ತೆರಳಿ ಪೊಲೀಸರಿಗೆ ದೂರು ನೀಡಲು ಹೋಗಿದ್ದ.
ಪೊಲೀಸರ ವಿಚಾರಣೆಯ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಮೊಮ್ಮಗನ ವಿರುದ್ಧವೇ ಅಜ್ಜಿ ತಾರಾಬಾಯಿ ದೂರು ನೀಡಿದ್ದಾರೆ. ಕೊಲೆಗಡುಕ ಮಗ ಶೇಖರನನ್ನು ಕೆಂಭಾವಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.