
ಜನಪ್ರಿಯ ರಿಯಾಲಿಟಿ ಶೋ ʼಬಿಗ್ ಬಾಸ್ 13ʼ ರ ವಿಜೇತರಾಗಿದ್ದ ಸಿದ್ದಾರ್ಥ್ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಡ್ಯಾನ್ಸ್ ದಿವಾನೆ 3 ರಲ್ಲೂ ತಮ್ಮ ಗೆಳತಿ ಶೆಹನಾಜ್ ಗಿಲ್ ಜೊತೆ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಿದ್ದಾರ್ಥ್ ಶುಕ್ಲಾ ಇಹಲೋಕ ತ್ಯಜಿಸಿರುವುದು ಚಿತ್ರರಂಗದವರನ್ನು ದಿಗ್ಬ್ರಮೆಗೊಳಿಸಿದೆ.
ಡಿಸೆಂಬರ್ 12, 1980 ರಂದು ಮುಂಬೈನಲ್ಲಿ ಸಿದ್ದಾರ್ಥ್ ಶುಕ್ಲಾ ಜನಿಸಿದ್ದು, ಮೂಲತಃ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನವರೆಂದು ತಿಳಿದುಬಂದಿದೆ. ಬಾಲಿವುಡ್ ಚಿತ್ರಗಳಲ್ಲೂ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದರು.