ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ವೈರಲ್ ಮಾಡಿದ್ದರು ಎಂಬ ಆರೋಪಿ ಹೊತ್ತಿದ್ದ ನಾಲ್ವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಆರೋಪಿಗಳಾದ ಕಾರ್ತಿಕ್ ಗೌಡ, ನವೀನ್ ಗೌಡ, ಚೇತನ್ ಹಾಗೂ ಪುಟ್ಟರಾಜು ಅವರುಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಈ ಪೈಕಿ ಕಾರ್ತಿಕ್ ಗೌಡ, ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ.
ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನ ಕ್ಷೇತ್ರದಾದ್ಯಂತ ಅಶ್ಲೀಲ ವಿಡಿಯೋ ಒಳಗೊಂಡಿರುವ ಸಾವಿರಾರು ಪೆನ್ ಡ್ರೈವ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗಿದ್ದು, ಈ ಸಂಬಂಧ ಮೇಲ್ಕಂಡವರ ವಿರುದ್ಧ ವಕೀಲ ಪೂರ್ಣಚಂದ್ರ ದೂರು ಸಲ್ಲಿಸಿದ್ದರು. ಹೀಗಾಗಿ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅದೀಗ ವಜಾಗೊಂಡಿದೆ.