ಪಂಜಾಬ್‌ನ ನೂತನ ಡಿಜಿಪಿಯಾಗಿ ಐಪಿಎಸ್ ವೀರೇಶ್ ಕುಮಾರ್ ಭಾವ್ರ ಅವರನ್ನು ನೇಮಕ ಮಾಡಲಾಗಿದೆ. ವಿ.ಕೆ.ಭಾವ್ರ ನೇಮಕಕ್ಕೆ ಸಿಎಂ ಚರಣ್ ಜಿತ್ ಚನ್ನಿ ಅನುಮೋದನೆ ನೀಡಿದ್ದಾರೆ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಶಾರ್ಟ್‌ಲಿಸ್ಟ್ ಮಾಡಿದ ಮೂವರು ಅಧಿಕಾರಿಗಳ ಸಮಿತಿಯಿಂದ 1987 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯನ್ನು ಪಂಜಾಬ್ ಸರ್ಕಾರ ಆಯ್ಕೆ ಮಾಡಿದೆ. ಸಮಿತಿಯಲ್ಲಿದ್ದ ಇತರ ಇಬ್ಬರು ಅಧಿಕಾರಿಗಳು ದಿನಕರ್ ಗುಪ್ತಾ ಮತ್ತು ಪ್ರಬೋಧ್ ಕುಮಾರ್.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನಿಂದ ಪಡೆದ ಫಲಕವನ್ನು ಪರಿಗಣಿಸಿ, ಪಂಜಾಬ್‌ನ ರಾಜ್ಯಪಾಲ ಐಪಿಎಸ್ ವೀರೇಶ್ ಕುಮಾರ್ ಭಾವ್ರ, ಅವರನ್ನು ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರಾಗಿ (ಪೊಲೀಸ್ ಫೋರ್ಸ್ ಮುಖ್ಯಸ್ಥ) ನೇಮಿಸಿದ್ದಾರೆ.
ವಿ.ಕೆ.ಭಾವ್ರ ಅವರ ಅಧಿಕಾರಾವಧಿಯು, ಸುಪ್ರೀಂ ಕೋರ್ಟ್‌ನ ಆದೇಶಗಳ ಅನುಸಾರವಾಗಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಕನಿಷ್ಠ ಎರಡು ವರ್ಷಗಳ ಅವಧಿಯದ್ದಾಗಿರುತ್ತದೆ ಎಂದು ಪಂಜಾಬ್ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಹಿಂದೆ ಪಂಜಾಬ್ ನ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವ್ರನ್ನ, ಪಿಎಂ ಭದ್ರತಾಲೋಪದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸಲಾಗಿದೆ. ಈಗ ಅವರ ಸ್ಥಾನಕ್ಕೆ ವಿ.ಕೆ. ಭಾವ್ರ ಅವರನ್ನ ನೇಮಿಸಲಾಗಿದೆ.