ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಹಲವು ಬ್ಯಾಂಕ್‌ಗಳಿಗೆ ಭಾರೀ ದಂಡ ವಿಧಿಸಿದೆ. ನಿಯಮಗಳನ್ನು ಸರಿಯಾಗಿ ಅನುಸರಿಸದ ಬ್ಯಾಂಕ್ ಗಳಿಗೆ ದಂಡ ಹಾಕಿದೆ. ಕೆಲ ದಿನಗಳ ಹಿಂದಷ್ಟೆ ಆರ್ ಬಿ ಐ 3 ಬ್ಯಾಂಕ್ ಗಳಿಗೆ ಇದೇ ರೀತಿ ದಂಡ ವಿಧಿಸಿತ್ತು.
ಪಶ್ಚಿಮ ಬಂಗಾಳದ ನಬಪಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ 4 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ಇದಲ್ಲದೆ ಹಿಮಾಚಲ ಪ್ರದೇಶದ ಬಘಾತ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ 3 ಲಕ್ಷ ರೂಪಾಯಿ, ಮಣಿಪುರ ಮಹಿಳಾ ಸಹಕಾರಿ ಬ್ಯಾಂಕ್, ಉತ್ತರ ಪ್ರದೇಶದ ಯುನೈಟೆಡ್ ಇಂಡಿಯಾ ಸಹಕಾರಿ ಬ್ಯಾಂಕ್, ನರಸಿಂಗ್ ಪುರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಅಮರಾವತಿ ಮರ್ಚೆಂಟ್ ಸಹಕಾರಿ ಬ್ಯಾಂಕ್, ನಾಸಿಕ್ ನ ಫೈಜ್ ಮರ್ಕೆಂಟೈಲ್ ಸಹಕಾರಿ ಬ್ಯಾಂಕ್, ಅಹಮದಾಬಾದ್ ನ ನವನಿರ್ಮಾಣ ಸಹಕಾರಿ ಬ್ಯಾಂಕ್ ಗೆ ಕೂಡ ದಂಡ ವಿಧಿಸಲಾಗಿದೆ.
ಒಟ್ಟು 8 ಸಹಕಾರಿ ಬ್ಯಾಂಕ್ ಗಳ ಮೇಲೆ ಈ ಬಾರಿ ಆರ್ ಬಿ ಐ ಚಾಟಿ ಬೀಸಿದೆ. ಅಂದಾಜು 12 ರಿಂದ 75 ಲಕ್ಷ ರೂಪಾಯಿವರೆಗೆ ದಂಡ ವಸೂಲಿಗೆ ಮುಂದಾಗಿದೆ. ಆರ್ ಬಿ ಐ ವಿಧಿಸಿರೋ ನಿಯಮಗಳನ್ನು ಪಾಲನೆ ಮಾಡದ ಇತರ ಬ್ಯಾಂಕ್ ಗಳಿಗೂ ಸದ್ಯದಲ್ಲೇ ಬಿಸಿ ತಟ್ಟಬಹುದು.