BREAKING: ದೆಹಲಿಯಲ್ಲಿ ನಡುಗಿದ ಭೂಮಿ; ಭೂಕಂಪನಕ್ಕೆ ಬೆಚ್ಚಿಬಿದ್ದ ಜನ 24-01-2023 2:35PM IST / No Comments / Posted In: Latest News, India, Live News ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದ ಭಯಭೀತರಾದ ಜನ ಮನೆ, ಕಛೇರಿಗಳಿಂದ ಓಡಿ ಬಂದಿದ್ದಾರೆ. ಹಲವಾರು ಮಂದಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಕೆಲವರು ಫೋಟೋ ಸಹ ಶೇರ್ ಮಾಡಿದ್ದಾರೆ. ಇಂದು ಮಧ್ಯಾಹ್ನ 2-25 ರ ಸುಮಾರಿಗೆ 38 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಭೂಕಂಪನದ ಕೇಂದ್ರ ಯಾವುದು, ತೀವ್ರತೆ ಎಷ್ಟು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. Strong earthquake tremors felt in Delhi pic.twitter.com/VZkRU4uyLy — ANI (@ANI) January 24, 2023