
ಕೊಡಗು: ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮತ್ತಿಕಾಡಿನಲ್ಲಿ ನಡೆದಿದೆ.
ಕಾರಿನ ಮೇಲೆ ಒಂಟಿ ಸಲಗ ದಾಳಿ ನಡೆಸುತ್ತಿದ್ದಂತೆ ತಕ್ಷಣ ಕಾರಿನಿಂದ ಇಳಿದ ದಂಪತಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕಾರಿನಲ್ಲಿ ದಂಪತಿ ಮತ್ತಿಕಾಡು ಮನೆಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಬೆಂಜ್ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕೋರನ ಟಿಪ್ಪು ಎಂಬುವವರಿಗೆ ಸೇರಿದ ಬೆಂಜ್ ಕಾರು ಇದಾಗಿದ್ದು, ಕಾಡಾನೆ ಕಾರನ್ನು ದಂತದಿಂದ ತಿವಿದು ಜಖಂಗೊಳಿಸಿದೆ.