ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಮಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಸರ್ವಜನಾಂಗದ ಶಾಂತಿಯ ತೋಟ ಇದು ಕಾಂಗ್ರೆಸ್ ಬದ್ಧತೆ, ಕಾಂಗ್ರೆಸ್ ಬರಲಿದೆ ಬದಲಾವಣೆ ತರಲಿದೆ ಎಂಬ ಘೋಷವಾಕ್ಯದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಮುಂದಿನ 25 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ಪ್ರಣಾಳಿಕೆ ಸಿದ್ದಪಡಿಸಲಾಗಿದೆ.
ಪ್ರಣಾಳಿಕೆಯ ಅಂಶಗಳು:
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್
ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ನೆರವು ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1,500
ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ. ಸಹಾಯ ಧನ
ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ
ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ
ಖಾಲಿಯಿರುವ ಎಲ್ಲಾ ಸರ್ಕಾರಿ ಹುದ್ದೆಗಳು 1 ವರ್ಷದಲ್ಲಿ ಭರ್ತಿ
ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ನೌಕರರ ಖಾಯಂ
ಅಂಗನವಾಡಿ ಕಾರ್ಯಕರ್ತರ ವೇತನ 11,500ರಿಂದ 15,000ಕ್ಕೆ ಹೆಚ್ಚಳ
ಆಶಾಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ,ಗೆ ಹೆಚ್ಚಳ
ಬಿಸಿಯೂಟ ನೌಕರರ ವೇತನ 6000ಕ್ಕೆ ಹೆಚ್ಚಳ
ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ 5000 ವಿಶೇಷ ಭತ್ಯೆ
ಎಲ್ಲಾ ಪೊಲೀಸರಿಗೆ ವರ್ಷಕ್ಕೆ 1 ತಿಂಗಳ ವೇತನ ಹೆಚ್ಚುವರಿ ಪಾವತಿ
ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆ ನಿರ್ಮಾಣ
ಬಜರಂಗಧಳ, ಪಿ ಎಫ್ ಐ ನಿಷೇಧ
ಕರ್ನಾಟಕ ಮಾಹಿತಿದಾರರ ಸಂರಕ್ಷಣಾ ಕಾಯ್ದೆ ಜಾರಿ
ಕನಕಪುರದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಬಸ್
ಎಸ್ ಸಿ ಸಮುದಾಯದ ಮೀಸಲಾತಿ ಶೇ.17ಕ್ಕೆ ಹೆಚ್ಚಳ ಭರವಸೆ
ಎಸ್ ಟಿ ಸಮುದಾಯಕ್ಕೆ ಶೇ.7ಕ್ಕೆ ಹೆಚ್ಚಳ
ಮುಸ್ಲಿಂರಗಿ ಶೇ.4 ಮೀಸಲಾತಿ ಮರು ಸ್ಥಾಪನೆ
ಮಂಗಳಮುಖಿ ಮಂಡಳಿ ಸ್ಥಾಪನೆ
ಆಟೋಚಾಲಕರ ಮಂಡಳಿ, ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ
ಪ್ರತಿ ಗ್ರಾಮ ಪಂಚಾಯಿತಿಗೂ ಹೈ ಸ್ಪೀಡ್ ವೈಫೈ ಕನೆಕ್ಷನ್
ಎನ್ ಇ ಪಿ ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿ ಜಾರಿ
ಸಾವಯವ ಕೃಷಿ ಉತ್ತೇಜನಕ್ಕಾಗಿ 2,500 ಕೋಟಿ ಹೂಡಿಕೆ
ದ್ರಾಕ್ಷಿ ಬೆಳೆಗೆ ಸಬ್ಸಿಡಿ ಒದಗಿಸಲು 500 ಕೋಟಿ
ರಬ್ಬರ್ ಕೃಷಿಗೆ 25 ಕೋಟಿ ವಿಶೇಷ ಪ್ಯಾಕೇಜ್
ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ
ಕರ್ನಾಟಕ ಕಾಫಿ ಉತ್ತೇಜನಕ್ಕೆ ಕಾಫಿ ಕರ್ನಾಟಕ ಬ್ರ್ಯಾಂಡ್ ಸೃಷ್ಟಿ
ಪ್ರತಿ ಲೀಟರ್ ಹಾಲಿನ ಸಬ್ಸಿಡಿ 5 ರೂ ನಿಂದ 7 ರೂಗೆ ಹೆಚ್ಚಳ