ಛತ್ತೀಸ್‌ಗಢ: ಕಬ್ಬಿಣ ತಯಾರಿಸುವ ಕಾರ್ಖಾನೆಯ ಚಿಮಣಿ ಕುಸಿದು 30 ಕಾರ್ಮಿಕರು ಸಿಲುಕಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಛತ್ತೀಸ್‌ಗಢದ ಮುಂಗೇಲಿಯ ಸರ್ಗಾಂವ್‌ನಲ್ಲಿ ಗುರುವಾರ ಕಂಪನಿಯ ಚಿಮಣಿ ಕುಸಿದು ಹಲವಾರು ಕಾರ್ಮಿಕರು ಕಬ್ಬಿಣ ತಯಾರಿಸುವ ಕಾರ್ಖಾನೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ ಒಬ್ಬ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಮುಂಗೇಲಿ ಕಲೆಕ್ಟರ್ ರಾಹುಲ್ ಡಿಯೋ ಅವರು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.