![](https://kannadadunia.com/wp-content/uploads/2022/12/page1-1-23.jpg)
ಜಮ್ಮು ಕಾಶ್ಮೀರದ ಅಬೋಹರ್ ವಲಯದಲ್ಲಿ ಬಿಎಸ್‌ಎಫ್ ಯೋಧನೊಬ್ಬ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಯೊಳಗೆ ಪ್ರವೇಶ ಮಾಡಿದ್ದ. ಪಾಕ್ ರೇಂಜರ್‌ಗಳೊಂದಿಗಿನ ಸತತ ಮೂರು ಸಭೆಗಳ ಬಳಿಕ ಯೋಧನನ್ನು ಸುರಕ್ಷಿತವಾಗಿ ಪಾಕಿಸ್ತಾನ ವಾಪಸ್ ಕಳುಹಿಸಿದೆ. ಇಂದು ದೇಶಾದ್ಯಂತ ಬಿಎಸ್‌ಎಫ್‌ನ 58ನೇ ರಾಸಿನ್ ದಿನವನ್ನು ಆಚರಿಸಲಾಗ್ತಿದೆ. ಈ ಸಮಯದಲ್ಲೇ ಭಾರತೀಯ ಸೈನಿಕ ಅಚಾನಕ್ಕಾಗಿ ಕಾಣೆಯಾಗಿದ್ದ.
ಬೆಳಗ್ಗೆ 6.30ರ ವೇಳೆಗೆ ದಟ್ಟ ಹಿಮ ಆವರಿಸಿತ್ತು. ಪೆಟ್ರೋಲಿಂಗ್‌ಗೆ ತೆರಳಿದ್ದ ಯೋಧನಿಗೆ ಗಡಿ ಗಮನಕ್ಕೆ ಬಾರದೇ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾನೆ ಎನ್ನಲಾಗ್ತಿದೆ. ಬೆಳಗ್ಗೆ 9.30ರ ವೇಳೆಗೆ ಯೋಧ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಸಾಕಷ್ಟು ಹುಡುಕಾಟ ನಡೆಸಿದ್ರೂ ಆತ ಪತ್ತೆಯಾಗಿರಲಿಲ್ಲ. ಬಳಿಕ ಪಾಕ್ ರೇಂಜರ್‌ಗಳನ್ನು ಸಂಪರ್ಕಿಸಿ ಸೈನಿಕನನ್ನು ವಾಪಸ್ ಕಳಿಸುವಂತೆ ಮನವಿ ಮಾಡಲಾಯ್ತು.
ಆರಂಭದಲ್ಲಿ ಪಾಕ್ ರೇಂಜರ್‌ಗಳು ಬಿಎಸ್‌ಎಫ್ ಯೋಧ ತಮ್ಮ ಬಳಿ ಇಲ್ಲವೆಂದು ವಾದಿಸುತ್ತಿದ್ದರು. ಸಾಕಷ್ಟು ಮನವೊಲಿಕೆ ಬಳಿಕ ಆತನನ್ನು ಮರಳಿ ಕಳುಹಿಸಲು ಸಮ್ಮತಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ.