
ಫೆಬ್ರವರಿ 14ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು ಇದರ ಪ್ರಕಾರ ಅಂತಾರಾಷ್ಟ್ರೀಯ ಪ್ರಯಾಣದಿಂದ ಆಗಮಿಸಿದ ಪ್ರಯಾಣಿಕರು 14 ದಿನಗಳ ಕಾಲ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತವರು ಐಸೋಲೇಟ್ ಆಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.
ಅಂತಾರಾಷ್ಟ್ರೀಯ ಪ್ರಯಾಣದಿಂದ ಆಗಮಿಸಿದವರು ಮೊದಲು ಥರ್ಮಲ್ ಸ್ಕ್ರೀನಿಂಗ್ಗೆ ಒಳಗಾಗುತ್ತಾರೆ. ಈ ಅವಧಿಯಲ್ಲಿ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೆ ಅವರು ವೈದ್ಯಕೀಯ ಸೌಲಭ್ಯದ ಜೊತೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಒಂದು ವೇಳೆ ಪ್ರಯಾಣಿಕರ ಕೋವಿಡ್ ವರದಿಯು ಪಾಸಿಟಿವ್ ಬಂದರೆ ಬಳಿಕ ಮಾರ್ಗಸೂಚಿಯ ನಿಯಮದಂತೆ ಅವರ ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತದೆ.
ಮಾರ್ಗಸೂಚಿಯ ಪ್ರಕಾರ ಈ ಹಿಂದೆ ಕೆಲವು ದೇಶಗಳಲ್ಲಿ ಅಪಾಯಕಾರಿ ಎಂದು ನೀಡಲಾಗಿದ್ದ ಟ್ಯಾಗ್ನ್ನು ಇದೀಗ ತೆಗೆದು ಹಾಕಲಾಗಿದೆ. 82 ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಈ ಹಿಂದೆ 72 ಗಂಟೆಗಳ ಅವಧಿಯಲ್ಲಿ ಆರ್ಟಿ ಪಿಸಿಆರ್ ವರದಿಯನ್ನು ತೋರಿಸುವ ಬದಲು ಎರಡು ಡೋಸ್ ಲಸಿಕೆಗಳನ್ನು ಪಡೆದ ಬಗ್ಗೆ ವರದಿಯನ್ನು ನೀಡಿದರೆ ಸಾಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.