ಮೊದಲ ಬಾರಿಗೆ ಸೀರೆ ಉಟ್ಟವರು ಸರಿಯಾಗಿ ನಡೆಯಲೂ ಕಷ್ಟಪಡ್ತಾರೆ. ಸೀರೆ ಉಟ್ಟು ರೂಢಿಯಿದ್ದವರು ರನ್ನಿಂಗ್ ರೇಸ್ ನಲ್ಲಿ ಭಾಗವಹಿಸೋದಾಗಾಲೀ, ಆಟ ಆಡೋದಾಗಲೀ ಕಷ್ಟಸಾಧ್ಯ.
ಆದರೆ ಸೀರೆಯುಟ್ಟು ಬ್ರೇಕ್ ಡ್ಯಾನ್ಸ್ ಮಾಡೋಕೆ ಸಾಧ್ಯನಾ? ಇಂತಹ ಪ್ರಶ್ನೆಗೆ ಯುವತಿಯೊಬ್ಬಳು ಸ್ಪಷ್ಟ ಉತ್ತರ ಕೊಟ್ಟು ಹೌದು, ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಹೀಲ್ಸ್ ಹಾಕಿಕೊಂಡು ಸೀರೆಯಲ್ಲಿ ಎಲ್ಲರೂ ನೆಬ್ಬೆರಗಾಗುವಂತೆ ಬ್ರೇಕ್ ಡ್ಯಾನ್ಸ್ ಮಾಡಿರುವ ಯುವತಿಯ ವಿಡಿಯೋ ವೈರಲ್ ಆಗಿದೆ. ಯುವತಿಯ ಕಾನ್ಫಿಡೆನ್ಸ್ ಗೆ ನೆಟ್ಟಿಗರು ವಾಹ್ ಎಂದಿದ್ದಾರೆ.