alex Certify BREAKING : ಅಮೆರಿಕದಲ್ಲಿ ‘ಕ್ಯಾನ್ಸರ್’ ಗೆದ್ದ ನಟ ಶಿವರಾಜ್’ಕುಮಾರ್ : ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ |WATCH VIDEO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಅಮೆರಿಕದಲ್ಲಿ ‘ಕ್ಯಾನ್ಸರ್’ ಗೆದ್ದ ನಟ ಶಿವರಾಜ್’ಕುಮಾರ್ : ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ |WATCH VIDEO

ಅಮೆರಿಕದಲ್ಲಿ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಗೆದ್ದಿದ್ದು, ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಶಿವಣ್ಣ ನಿಮ್ಮ ಆಶೀರ್ವಾದ , ಪ್ರೀತಿ ವಿಶ್ವಾಸ ಇರುವವರೆಗೂ ನನಗೆ ಏನಾಗಲ್ಲ. ನಾನು ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದೇನೆ, ಮತ್ತೆ ಸಿನಿಮಾ ಮಾಡುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದಾರೆ.ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯದ ವರದಿಗಳು ನೆಗೇಟಿವ್ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇತ್ತೀಚಿಗೆ ಶಸ್ತ್ರಚಿಕಿತ್ಸೆಗೊಳಗಾಗಿರುವ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಜನವರಿ ಅಂತ್ಯದಲ್ಲಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಆಪರೇಷನ್ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಆಪರೇಷನ್ ಸಕ್ಸಸ್ ಆಗಿದೆ. ಜನವರಿ 26 ರಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ. ಶಿವಣ್ಣ ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, ಅಲ್ಲೇ ರೆಸ್ಟ್ ಮಾಡಿ ಜನವರಿ 26 ಕ್ಕೆ ಭಾರತಕ್ಕೆ ಮರಳಲಿದ್ದಾರೆ.ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಪರೇಷನ್ ಸಕ್ಸಸ್ ಆಗಿದೆ . ಸತತ 6 ಗಂಟೆಗಳ ಕಾಲ ಯಶಸ್ವಿ ಆಪರೇಷನ್ ನಡೆಸಲಾಗಿತ್ತು.

 

View this post on Instagram

 

A post shared by DrShivaRajkumar (@nimmashivarajkumar)

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...