alex Certify Shocking; ಲೈವ್ ಪರ್ಫಾಮೆನ್ಸ್ ವೇಳೆ ತಬ್ಬಿಕೊಂಡ ಅಭಿಮಾನಿ; ಗಾಯಕ ಸಾವು…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking; ಲೈವ್ ಪರ್ಫಾಮೆನ್ಸ್ ವೇಳೆ ತಬ್ಬಿಕೊಂಡ ಅಭಿಮಾನಿ; ಗಾಯಕ ಸಾವು…….!

ಬ್ರೆಜಿಲಿಯನ್ ಗಾಯಕ ಐರೆಸ್ ಸಸಾಕಿ ಲೈವ್‌ ಪರ್ಫಾರ್ಮೆನ್ಸ್‌ ವೇಳೆ ಸಾವನ್ನಪ್ಪಿದ್ದಾರೆ. ಐರೆಸ್‌ ಸಸಾಕಿಗೆ 35 ವರ್ಷ ವಯಸ್ಸಾಗಿತ್ತು.  ಸಲಿನೋಪೊಲಿಸ್‌ನ ಸೋಲಾರ್ ಹೋಟೆಲ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಯಡವಟ್ಟಿನಿಂದ ಸಸಾಕಿ ಸಾವನ್ನಪ್ಪಿದ್ದಾರೆ. ಒದ್ದೆಯಾಗಿದ್ದ ಅಭಿಮಾನಿ, ಸಸಾಕಿಯನ್ನು ಅಪ್ಪಿಕೊಂಡಿದ್ದಾನೆ. ಈ ವೇಳೆ ವಿದ್ಯುತ್‌ ಶಾಕ್‌ ಹೊಡೆದು ಐರೆಸ್‌ ಸಸಾಕಿ ಸಾವನ್ನಪ್ಪಿದ್ದಾರೆ. ಸಸಾಕಿ ಒಂದು ವರ್ಷದ ಹಿಂದಷ್ಟೆ ಮದುವೆ ಆಗಿದ್ದರು.

ಗಾಯಕ ಐರೆಸ್‌ ಸಸಾಕಿ ಚಿಕ್ಕಮ್ಮ ರೀಟಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆದ್ರೆ ಕಾರ್ಯಕ್ರಮದಲ್ಲಿ ಏನಾಯ್ತು ಎಂಬುದು ಅವರಿಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ, ಅಲ್ಲಿದ್ದವರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದೇನೆ ಎಂದು ಚಿಕ್ಕಮ್ಮ ಹೇಳಿದ್ದಾರೆ.

ಕಾರ್ಯಕ್ರಮದ ವೇಳೆ ಅಭಿಮಾನಿ ಒದ್ದೆಯಾಗಿದ್ದ ಎನ್ನುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕುಟುಂಬಸ್ಥರ ಜೊತೆ ನಾವು ಸಂಪರ್ಕದಲ್ಲಿದ್ದೇವೆ, ಪೊಲೀಸರ ತನಿಖೆಗೆ ಸ್ಪಂದಿಸುತ್ತಿದ್ದೇವೆ ಎಂದು ಹೊಟೇಲ್‌ ಮಾಲೀಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...