ಬ್ರೆಜಿಲ್‌ನ 43 ವರ್ಷದ ನಿವಾಸಿ ಗಿಲ್ಸನ್ ದೊ ನಾಸಿಮೆಂಟೊ, ಕ್ಯಾನ್ಸರ್ ರೋಗವನ್ನೇ ಮಣಿಸಿ, ಆರಾಮಾಗಿ ಕಾಲಕಳೆಯುತ್ತಿದ್ದ. ಆದರೆ ಸೆ.17ರಂದು ತನ್ನ ಬರ್ತ್ ಡೇ ಪಾರ್ಟಿ ಮಾಡುವ ಭರದಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ!
ಹೌದು, ಗಿಲ್ಸನ್ ‘ಬೂಜ್ ಬ್ಯಾರೆಲ್ ಪಾರ್ಟಿ’ ಯನ್ನು ಆಯೋಜಿಸಿ, ಎಲ್ಲ ಸ್ನೇಹಿತರನ್ನು ಆಹ್ವಾನಿಸಿದ್ದ. ಆದರೆ ಪಾರ್ಟಿ ಮಧ್ಯೆ ಬ್ಯಾರೆಲ್‌ನಿಂದ ಸರಿಯಾಗಿ ಬಿಯರ್ ಸುರಿಯುತ್ತಿರಲಿಲ್ಲ. ಅದರಲ್ಲಿ ಏನೋ ದೋಷ ಉಂಟಾಗಿದೆ ಎಂದು ಮನಗಂಡ ಗಿಲ್ಸನ್ ರಿಪೇರಿ ಮಾಡಲು ಮುಂದಾದ.
ಬಿಯರ್ ಬ್ಯಾರೆಲ್ ಬಾಡಿಗೆಗೆ ಕೊಟ್ಟಿದ್ದ ಕಂಪನಿಗೆ ಕರೆ ಮಾಡಿದಾಗ ಅವರು ಕೆಲವು ಸೂಚನೆಗಳನ್ನು ನೀಡಿದರು. ಬ್ಯಾರೆಲ್‌ನಲ್ಲಿ ಅತಿಯಾದ ಒತ್ತಡ ಇರುತ್ತದೆ ಎಂದು ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದರು.
IPL: ಕುತೂಹಲ ಮೂಡಿಸಿದ ಹೈವೋಲ್ಟೇಜ್ ಮ್ಯಾಚ್; ಕೊಹ್ಲಿ –ಧೋನಿ ಟೀಂ ಮುಖಾಮುಖಿ
ಕುಡಿದ ಮತ್ತಿನಲ್ಲಿ ಬ್ಯಾರೆಲ್ ಅನ್ನು ಹೇಗೇಗೊ ತೆರೆಯಲು ಯತ್ನಿಸಿದ ಪರಿಣಾಮ ಅದು ಸ್ಫೋಟಗೊಂಡಿತು. ಅದರಲ್ಲಿನ ಲೋಹದ ಚೂಪಾದ ತುಣುಕುಗಳು ಗಿಲ್ಸನ್ ತಲೆಯನ್ನು ಸೀಳಿಹಾಕಿದವು. ಆರು ವರ್ಷಗಳ ಮುನ್ನ ಕ್ಯಾನ್ಸರ್ ವಿರುದ್ಧ ಐಸಿಯುನಲ್ಲಿ ಹೋರಾಡಿ, ಮೃತ್ಯುವನ್ನು ಜಯಿಸಿ ಬಂದಿದ್ದ ಗಿಲ್ಸನ್ ಕೊನೆಯಲ್ಲಿ ಪ್ರಾಣಬಿಟ್ಟಿದ್ದು ಬಿಯರ್ ಬ್ಯಾರೆಲ್‌ನಿಂದಾಗಿ. ಇದು ನಿಜವಾಗಲೂ ದೌರ್ಭಾಗ್ಯ ಎಂದು ಪೊಲೀಸ್ ಮುಖ್ಯಸ್ಥ ಕ್ಲೊವಿಸ್ ನೀ ಡಾ ಸಿಲ್ವಾ ಹೇಳಿದ್ದಾರೆ. ಗಿಲ್ಸನ್‌ಗೆ ಪತ್ನಿ, ತಾಯಿ ಹಾಗೂ 15 ವರ್ಷದ ಮಗನಿದ್ದಾನೆ.