ರಿಯೋ ಡಿ ಜನೈರೋ: ಲ್ಯಾಟಿನ್ ಅಮೆರಿಕದ ದೊಡ್ಡ ದೇಶವಾಗಿರುವ ಬ್ರೆಜಿಲ್ ನಲ್ಲಿ ಒಂದೇ ದಿನ 3251 ಸೋಂಕಿತರು ಸಾವನ್ನಪ್ಪಿದ್ದಾರೆ.
ಬ್ರೆಜಿಲ್ ನಲ್ಲಿ ಕೊರೋನಾ ಸೋಂಕು ತಡೆಯಲು ಏನೆಲ್ಲಾ ಕ್ರಮ ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ. ಕೊರೋನಾ ಅಬ್ಬರ ಜೋರಾಗಿದ್ದು, ಮಂಗಳವಾರ ಒಂದೇ ದಿನ 3251 ಜನ ಸಾವನ್ನಪ್ಪಿದ್ದಾರೆ. ಸಾವೊಪೋಲೋ ನಗರದಲ್ಲಿ 1021 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಆರೋಗ್ಯ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗಿದ್ದು, ಐಸಿಯು, ವೆಂಟಿಲೇಟರ್ ಕೊರತೆ ಕಂಡುಬಂದಿದೆ. ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 3 ಲಕ್ಷ ಸಮೀಪಕ್ಕೆ ತಲುಪಿದೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.