ವಾರದ ಹಿಂದೆ ಬ್ರೆಜಿಲ್‌ನಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ತಜ್ಞ ಬ್ರೂನೋ ಪೆರೇರಾ ಮತ್ತು ಬ್ರಿಟಿಷ್ ಪತ್ರಕರ್ತ ಡೊಮ್ ಫಿಲಿಪ್ಸ್ ಅವರಿಗೆ ಸೇರಿದ ಬ್ಯಾಕ್ ಪ್ಯಾಕ್, ಲ್ಯಾಪ್‌ಟಾಪ್ ಮತ್ತು ಇತರ ವೈಯಕ್ತಿಕ ವಸ್ತುಗಳು ಅಮೆಜಾನ್ ತೀರದಲ್ಲಿ ಶೋಧ ತಂಡಕ್ಕೆ ಸಿಕ್ಕಿದೆ ಎಂದು ಫೆಡರಲ್ ಪೊಲೀಸರು ತಿಳಿಸಿದ್ದಾರೆ.
ಫಿಲಿಪ್ಸ್‌ಗೆ ಸೇರಿದ ಬ್ಯಾಕ್ ಪ್ಯಾಕ್ ಅರ್ಧ ಮುಳುಗಿದ ಮರದಲ್ಲಿ ಸಿಲುಕಿತ್ತು. ಬೋಟ್ ಮೂಲಕ ಅಲ್ಲಿ ಪತ್ತೆಯಾದ ವಸ್ತುಗಳನ್ನು ಅಟಾಲಿಯಾ ಡೊ ನಾರ್ಟೆಗೆ ತಂದರು. ಪಿರೇರಾ ಹೆಲ್ತ್ ಕಾರ್ಡ್ ಮತ್ತು ಬಟ್ಟೆ ಗುರುತಿಸಿದ್ದೇವೆ ಎಂದು ಪೊಲೀಸರು ಹೇಳಿದರು. ಅವರಿಬ್ಬರು ಬಳಸಿದ ಬೋಟ್ ಟಾರ್ಪ್ ಅನ್ನು ಮ್ಯಾಟಿಸ್ ಸ್ವಯಂಸೇವಕರು ಶನಿವಾರ ಪತ್ತೆಮಾಡಿದರು.
ಪೆರೇರಾ 41) ಮತ್ತು ಫಿಲಿಪ್ಸ್ ( 57) ಜೂನ್ 5 ರಂದು ಪೆರು ಮತ್ತು ಕೊಲಂಬಿಯಾದ ಗಡಿಯಲ್ಲಿರುವ ಸ್ಥಳೀಯ ಪ್ರವೇಶ ಗೇಟ್ ಬಳಿ ಕಾಣಿಸಿಕೊಂಡಿದ್ದರು. ಬಳಿಕ ಅವರು ಇಟಾಕ್ವಾಯ್ ನದಿಯಲ್ಲಿ ದೋಣಿಯಲ್ಲಿ ಸಾಗಿದ್ದರು.
ಆ ಪ್ರದೇಶವು ಮೀನುಗಾರರು, ಕಳ್ಳ ಬೇಟೆಗಾರರು ಮತ್ತು ಸರ್ಕಾರಿ ಎಜೆನ್ಸಿಗಳ ನಡುವೆ ಹಿಂಸಾತ್ಮಕ ಸಂಘರ್ಷಗಳನ್ನು ಕಂಡಿದೆ. ಹಾಗೆಯೇ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್‌ಗಳು ಕೊಕೇನ್ ಸಾಗಿಸಲು ಜಲಮಾರ್ಗಗಳ ನಿಯಂತ್ರಣಕ್ಕಾಗಿ ಹೋರಾಡುತ್ತಿರುವುದರಿಂದ ಹಿಂಸಾಚಾರವು ನಡೆದಿದ್ದಿದೆ.
ನಾಪತ್ತೆಯ ಬಗ್ಗೆ ತಿಳಿದಿರುವ ಏಕೈಕ ಶಂಕಿತ ಮೀನುಗಾರ ಬಂಧನಕ್ಕೊಳಗಾಗಿದ್ದು, ಶಂಕಿತನು ತನ್ನಿಂದ ಯಾವುದೇ ತಪ್ಪು ನಡೆದಿಲ್ಲ ಎಂದಿದ್ದಾನೆ.