alex Certify ಎರಡು ಶಿಶ್ನಗಳೊಂದಿಗೆ ಬಾಲಕನ ಜನನ; ಶಸ್ತ್ರ ಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿ ತೆಗೆದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಶಿಶ್ನಗಳೊಂದಿಗೆ ಬಾಲಕನ ಜನನ; ಶಸ್ತ್ರ ಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿ ತೆಗೆದ ವೈದ್ಯರು

ಬ್ರೆಜಿಲ್: ಇಲ್ಲೊಬ್ಬ ಬಾಲಕ ಎರಡು ಶಿಶ್ನಗಳೊಂದಿಗೆ ಜನಿಸಿದ್ದ. ಒಂದನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದ್ದರು. ಕತ್ತರಿಸುವುದಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು, ದೊಡ್ಡದಾಗಿರುವುದನ್ನೇ.

ಎರಡೆರಡು ಶಿಶ್ನಗಳೊಂದಿಗೆ ಗಂಡು ಮಕ್ಕಳು ಹುಟ್ಟುವುದು ತೀರ ವಿರಳ. ಹತ್ತು ಲಕ್ಷಗಳಲ್ಲಿ ಒಂದು ಮಗು ಎನ್ನಬಹುದು. ಸಾವೋಪೌಲೋದ ವೈದ್ಯರ ಪ್ರಕಾರ, ಜಗತ್ತಿನಲ್ಲಿ ಈವರೆಗೆ ಕೇವಲ 100 ಗಂಡು ಮಕ್ಕಳು ಮಾತ್ರ ಈ ರೀತಿ ಎರಡೆರಡು ಶಿಶ್ನಗಳೊಂದಿಗೆ ಜನಿಸಿದ್ದಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಡಿಫಾಲ್ಲಿಯಾ ಎನ್ನುತ್ತಾರೆ.

ಇಂತಹ ಒಂದು ಪ್ರಕರಣವನ್ನು ಅವರು ಜರ್ನಲ್ ಆಫಿ ಪೀಡಿಯಾಟ್ರಿಕ್ ಯುರಾಲಜಿಯಲ್ಲಿ ವಿವರಿಸಿದ್ದಾರೆ. ಎರಡೂ ಶಿಶ್ನಗಳು ಅಕ್ಕಪಕ್ಕದಲ್ಲಿದ್ದವು. ಇದನ್ನು ಪೂರ್ಣ ಡಿಫಾಲ್ಲಿಯಾ ಎನ್ನುತ್ತಾರೆ. ಒಂದು ಶಿಶ್ನವು ಮಾತ್ರ ಎಲ್ಲ ಕಾರ್ಯಗಳನ್ನೂ ಮಾಡುತ್ತಿರುತ್ತದೆ. ಮತ್ತೊಂದು ಹೆಚ್ಚುವರಿಯಾಗಿ ಅಂಟಿಕೊಂಡಿರುತ್ತದೆ, ಅಷ್ಟೇ.

ಸೂಕ್ಷ್ಮವಾಗಿ ಪರಿಶೀಲಿಸಿದ ವೈದ್ಯರು, ಎಡಗಡೆಯ ಶಿಶ್ನವು ಸ್ವಲ್ಪ ದೊಡ್ಡದಾಗಿದೆ. ಹೀಗಾಗಿ, ಬಲಗಡೆಯಲ್ಲಿರುವ ಸಣ್ಣ ಶಿಶ್ನವನ್ನೇ ತೆಗೆದು ಹಾಕಲು ಯೋಜಿಸಿದ್ದರು. ಎರಡೂ ಶಿಶ್ನಗಳು ಗಾತ್ರದಲ್ಲಿ ಹೆಚ್ಚು ಕಡಿಮೆಯಿದ್ದರೂ, ನೋಡಲು ಬಹುತೇಕ ಒಂದೇ ರೀತಿ ಇದ್ದವು ಮತ್ತು ಕೆಲಸ ಮಾಡುತ್ತಿದ್ದವು. ಎರಡೂ ಶಿಶ್ನಗಳು ನಿಮಿರುವಿಕೆಯ ಶಕ್ತಿಯನ್ನೂ ಹೊಂದಿದ್ದವು.

ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ, ಈ ಎರಡು ಶಿಶ್ನಗಳ ಪೈಕಿ ಒಂದು ಮಾತ್ರ ಕಾರ್ಪೊರಾ ಕಾವರ್ನೊಸಾ – ಎಂದರೆ ರಕ್ತದಿಂದ ತುಂಬಿಕೊಂಡು ಶಿಶ್ನವು ಗಟ್ಟಿಯಾಗುವಂತೆ ಮಾಡುವ ಸ್ಪಾಂಜ್‌ನಂತಹ ಅಂಗಾಂಶಗಳನ್ನು ಹೊಂದಿರುವುದು ಕಂಡುಬಂತು. ಸಣ್ಣ ಶಿಶ್ನದಿಂದ ಮಾತ್ರ ಮೂತ್ರ ವಿಸರ್ಜಿಸುವುದು ಮಗುವಿಗೆ ಸಾಧ್ಯವಾಗುತ್ತಿದೆ ಎಂದು ತಾಯಿ ಹೇಳಿದ್ದು, ವೈದ್ಯಕೀಯ ಪರೀಕ್ಷೆಯಲ್ಲೂ ಸತ್ಯವೆಂದು ದೃಢಪಟ್ಟಿತ್ತು. ದೊಡ್ಡ ಶಿಶ್ನದಲ್ಲಿದ್ದ ಮೂತ್ರನಾಳವು ತುಂಬ ತೆಳ್ಳಗಿದ್ದು, ಅದರಿಂದ ಮೂತ್ರ ವಿಸರ್ಜಿಸಲು ಸಾಧ್ಯವಿರಲಿಲ್ಲ.

ಆದ್ದರಿಂದ, ಗಾತ್ರವಲ್ಲ, ಅದರ ಕಾರ್ಯಶೀಲತೆಯ ಆಧಾರದಲ್ಲಿ ದೊಡ್ಡ ಶಿಶ್ನವನ್ನೇ ತೆಗೆದುಹಾಕಲು ವೈದ್ಯರು ನಿರ್ಧರಿಸಿದರು. ಈ ಅಪೂರ್ವ ಶಸ್ತ್ರಚಿಕಿತ್ಸೆಯ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ವೈದ್ಯರು ಮಾಡಿದ್ದು, ಜರ್ನಲ್‌ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟಿಸಿದ್ದಾರೆ.

ಬ್ರೆಜಿಲಿಯನ್ ವೈದ್ಯರ ತಂಡವು ಎಡಭಾಗದ ಶಿಶ್ನವನ್ನು ತೆಗೆದು, ಉಳಿದ ಚರ್ಮವನ್ನು ಅಚ್ಚುಕಟ್ಟಾಗಿ ಹೊಲಿಯುತ್ತಿರುವ ದೃಶ್ಯಗಳು ವೈದ್ಯಕೀಯ ಅಧ್ಯಯನಕ್ಕೆ ಸಹಾಯಕವಾಗಿವೆ.

ಶಿಶ್ನದಲ್ಲಿ ಒಂದೇ ನಿಮಿರುವಿಕೆ ಚೇಂಬರ್ ಇರುವುದರಿಂದ, ಭವಿಷ್ಯದಲ್ಲಿ ಈತ ನಿಮಿರುವಿಕೆಯನ್ನು ಅನುಭವಿಸುತ್ತಾನೆಯೇ ಎನ್ನುವುದು ಈಗಲೇ ಸ್ಪಷ್ಟವಾಗಿಲ್ಲ.

ಉಜ್ಬೆಕಿಸ್ತಾನದ ವೈದ್ಯರೂ ಇಂತಹ ಒಂದು ಪ್ರಕರಣವನ್ನು ವರದಿ ಮಾಡಿದ್ದಾರೆ. ಏಳು ವರ್ಷದ ಬಾಲಕನಿಗೆ ಸಕ್ರಿಯವಾಗಿದ್ದ ಎರಡು ಶಿಶ್ನಗಳಿದ್ದವು. ಎರಡರಲ್ಲೂ ಮೂತ್ರನಾಳ, ನಿಮಿರುವಿಕೆ ಅಂಗಾಂಶಗಳಿದ್ದವು. ಆದರೆ, ಎರಡೂ ಶಿಶ್ನಗಳಿಗೆ ನಿಮಿರುವಿಕೆ ಸಾಮರ್ಥ್ಯವಿದೆಯೇ ಎಂಬುದನ್ನು ಯುರಾಲಜಿ ಕೇಸ್ ರಿಪೋರ್ಟ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವರದಿ ತಿಳಿಸಿಲ್ಲ.

ಚಿಕಿತ್ಸೆಗಾಗಿ ಪೋಷಕರು ಏಳು ವರ್ಷಗಳ ಕಾಲ ಏಕೆ ವಿಳಂಬ ಮಾಡಿದರು ಎಂಬುದೂ ಸ್ಪಷ್ಟವಿಲ್ಲ. ಅಂತಿಮವಾಗಿ ವೈದ್ಯರು ಒಂದನ್ನು ತೆಗೆಯಬೇಕಾಗಿ ಬಂದಿದೆ.

ಸಂಶೋಧನೆಗಳ ಪ್ರಕಾರ ಎರಡು ಶಿಶ್ನಗಳಿರುವ ವ್ಯಕ್ತಿಗಳು ಸಾಮಾನ್ಯ ಲೈಂಗಿಕತೆ ಹಾಗೂ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುವುದಿಲ್ಲ ಎಂದು ಹೇಳಲು ಯಾವುದೇ ಆಧಾರವಿಲ್ಲ. ಆದರೆ, ಕಿಡ್ನಿ ನಿಷ್ಕ್ರಿಯವಾಗುವ, ಸೋಂಕಿಗೆ ತುತ್ತಾಗುವ ಹಾಗೂ ಅದರಿಂದ ಮರಣ ಸಂಭವಿಸುವ ಅಪಾಯ ಜಾಸ್ತಿ ಇರುತ್ತದೆ.

ಆದ್ದರಿಂದ, ಹೆಚ್ಚು ಕ್ರಿಯಾಶೀಲವಾಗಿರುವ ಒಂದನ್ನು ಉಳಿಸಿಕೊಂಡು ಮತ್ತೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದೇ ಕ್ಷೇಮ ಎಂದು ವೈದ್ಯಕಿಯ ಸಂಶೋಧನೆಗಳು ಹೇಳುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...