ಬ್ರೆಜಿಲ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 15 ವರ್ಷದ ಹುಡುಗ ಮೃತದೇಹ ಫ್ರೀಜರ್‌ನಲ್ಲಿ ಸಿಕ್ಕಿದೆ. ಸೆಕೆಯಿಂದ ರಕ್ಷಣೆ ಪಡೆಯಲು ಹುಡುಗ ಫ್ರೀಜರ್ ಒಳಗೆ ಕುಳಿತುಕೊಂಡಿದ್ದನಂತೆ. ಬಾಗಿಲು ಲಾಕ್ ಆದ ಕಾರಣ ಹೊರಬರಲು ಸಾಧ್ಯವಾಗಲಿಲ್ಲ. ಇದ್ರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಬಾಲಕ ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದಾರೆ. ಫ್ರೀಜರ್ ಬಳಿ ಕುರ್ಚಿಯಿತ್ತು. ಹಾಗಾಗಿ ಅಲ್ಲಿ ಮೃತ ಬಾಲಕ ಮಾತ್ರ ಇರಲಿಲ್ಲ. ಬೇರೆ ಯಾರೋ ಅಲ್ಲಿದ್ದರು ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ವರದಿ ಪ್ರಕಾರ 15 ವರ್ಷದ ಜೋಸ್ ಎಡ್ವರ್ಡೊ ರೋಸಾ ಮೃತದೇಹ ಅಜ್ಜಿ ಮನೆಯ ಫ್ರೀಜರ್ ನಲ್ಲಿ ಸಿಕ್ಕಿದೆ. ತುಂಬಾ ಸಮಯ ಆತ ಕಾಣಿಸದ ಕಾರಣ ಹುಡುಕಾಟ ಶುರು ಮಾಡಿದ್ದಾರೆ. ಅಜ್ಜಿ ಮನೆಯ ಫ್ರಿಜ್ ಬಳಿ ವಾಸನೆ ಬರ್ತಿದ್ದಂತೆ ಅದನ್ನು ತೆಗೆದು ನೋಡಿದ್ದಾರೆ. ಅಲ್ಲಿ ರೋಸಾ ಮೃತದೇಹ ಕಂಡಿದೆ.
ಊಹಿಸಲಾರದ ಘಟನೆ ನಡೆದಿದ್ದರಿಂದ ಮುಜುಗರಕ್ಕೊಳಗಾದ ಮಹಿಳೆ
ರೋಸಾ, ಅಜ್ಜಿ ಮನೆ ಕೀ ಸಿಗ್ತಿದ್ದಂತೆ ಯಾರಿಗೂ ಹೇಳದೆ ಅಲ್ಲಿಗೆ ಬಂದಿದ್ದಾನೆ. ಸೆಕೆ ತಾಳಲಾರದೆ ಫ್ರೀಜರ್ ಒಳಗೆ ಕುಳಿತಿದ್ದಾನೆ. ಆದ್ರೆ ಸಾವಿಗೆ ಕಾರಣ ಸರಿಯಾಗಿ ಪತ್ತೆಯಾಗಿಲ್ಲ. ಅಧಿಕ ರಕ್ತದೊತ್ತಡ ಅಥವಾ ಉಸಿರುಗಟ್ಟಿ ಆತ ಸಾವನ್ನಪ್ಪಿರಬಹುದೆಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಯುತ್ತಿದೆ. ರೋಸಾ ಚಿಕ್ಕಪ್ಪ ಒಂದು ವಾರದ ಹಿಂದೆ ಸಾವನ್ನಪ್ಪಿದ್ದಾನಂತೆ. ಅಜ್ಜ ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದಾನಂತೆ. ಈಗ ರೋಸಾ ಸಾವನ್ನಪ್ಪಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.