ಬ್ರೆಜಿಲ್: ಯುವತಿಯೊಬ್ಬರ ಮೊಬೈಲ್ ಕದ್ದ ಕಳ್ಳನೊಬ್ಬ ಬಳಿಕ ಆಕೆಯ ಬಾಯ್ ಫ್ರೆಂಡ್ ಆದ ವಿಲಕ್ಷಣ ಪ್ರಕರಣವೊಂದು ಭಾರಿ ವೈರಲ್ ಆಗುತ್ತಿದೆ.
ಯುವತಿಯೊಬ್ಬರು ತನ್ನ ಫೋನ್ ಕದ್ದ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಬ್ರೆಜಿಲ್‌ನಿಂದ ವರದಿಯಾಗಿರುವ ವಿಲಕ್ಷಣ ಪ್ರಕರಣವೊಂದರಲ್ಲಿ ಯುವತಿ ತನ್ನ ಫೋನ್ ಕದ್ದ ಕಳ್ಳನೇ ತನ್ನ ಬಾಯ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ.
ಆಕೆಯ ಫೋನ್ ದರೋಡೆಯಾದ ಕ್ಷಣವೇ ಅವರ ಮೊದಲ ಡೇಟ್ ಅಂತೆ. ವಿಚಿತ್ರವೆಂದರೆ ಇದು ಒನ್ ಸೈಡ್ ಪ್ರೇಮಕಥೆಯಲ್ಲ. ಮೊಬೈಲ್ ಕದ್ದ ವ್ಯಕ್ತಿ ಮೊಬೈಲ್ ನಲ್ಲಿರುವ ಆಕೆಯ ಫೋಟೋಗಳನ್ನು ನೋಡಿ ಆತನೂ ಆಕೆಯ ಪ್ರೀತಿಯಲ್ಲಿ ಬಿದ್ದಿದ್ದಾನಂತೆ. ಹೀಗಂತ ಸ್ವತಃ ಯುವತಿಯ ಬಾಯ್ ಫ್ರೆಂಡ್ ಹೇಳಿಕೊಂಡಿದ್ದಾನೆ.
ಯಾರಾದರೂ ರಸ್ತೆಯಲ್ಲಿ ತಮ್ಮ ಮೊಬೈಲ್ ಕದ್ದು ಪರಾರಿಯಾದರೆ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಾರೆ. ಆದರೆ ಈ ಯುವತಿಯ ಫೋನ್ ಕದ್ದ ಚೋರ ಆಕೆಯ ಹೃದಯವನ್ನೂ ಗೆದ್ದಿದ್ದಾನೆ.
“ಈ ಸುದ್ದಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯುವತಿ, ತಾನು ವ್ಯಕ್ತಿ ವಾಸಿಸುವ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ದುರದೃಷ್ಟವಶಾತ್ ಆತ ತನ್ನ ಫೋನ್ ಕದ್ದು ಪರಾರಿಯಾಗಿದ್ದ, ನಾನು ಮಂತ್ರಮುಗ್ಧಳಾಗಿದ್ದೇ……ಅದೇ ತಮ್ಮ ಫಸ್ಟ್ ಡೇಟ್ ಎಂದು ಬ್ರೆಜಿಲ್‌ನಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾಳೆ. ಅಂತರಾಷ್ಟ್ರೀಯ ಸುದ್ದಿ ಮಾಧ್ಯಮವು ಈ ಕಪಲ್ ಲವ್ ಸ್ಟೋರಿಯನ್ನು ವರದಿ ಮಾಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕಳ್ಳ ಬಾಯ್ ಫ್ರೆಂಡ್, ‘ ತನಗೆ ಯಾರೂ ಗೆಳತಿಯರಿರಲಿಲ್ಲ, ಫೋನ್ ನಲ್ಲಿ ಆಕೆಯ ಫೋಟೋ ನೋಡಿ ಎಂತಹ ಸುಂದರಿ ಈಕೆ, ದಿನವೂ ಸಿಗುವಂತಾಗಬಾರದೇ ಎಂದು ಮನದಲ್ಲೇ ಮರುಗಿದ್ದಾಗಿ ತಿಳಿಸಿದ್ದಾನೆ. ಮೊಬೈಲ್ ಕದ್ದ ಕಳ್ಳ ಮಹಿಳೆಯ ಹೃದಯವನ್ನೇ ಕದ್ದ ಕಥೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.