ಬ್ರೆಜಿಲ್ನ ಸಾವೊ ಪಾಲೊದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಅಪ್ರಾಪ್ತೆ, ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದ್ರೆ ತನಿಖೆ ವೇಳೆ ಯಾವುದೇ ಗಾಯಗಳಾಗಿರುವುದು ಕಂಡು ಬಂದಿಲ್ಲ. 15 ವರ್ಷದ ಗೇಬ್ರಿಯೆಲ್ಲಿ ಡಿಕ್ಸನ್, 26 ವರ್ಷದ ವ್ಯಕ್ತಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಳು. ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪ್ರಜ್ಞೆ ತಪ್ಪಿದ್ದಳಂತೆ. ಆಕೆ ತುಟಿ ಹಾಗೂ ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ತಿರುಗಿತ್ತೆಂದು ಆಕೆ ಜೊತೆಗಿದ್ದ ವ್ಯಕ್ತಿ ಹೇಳಿದ್ದಾನೆ.
ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆಕೆ ಯೋನಿಯಲ್ಲಿ ರಕ್ತ ಬಂದಿತ್ತು. ಆದ್ರೆ ಯಾವುದೇ ಹಿಂಸೆ ನಡೆದ ಸೂಚನೆ ಸಿಗ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ. ಗೇಬ್ರಿಯೆಲ್ಲಿ ಡಿಕ್ಸನ್ ಸಂಬಂಧದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಇರಲಿಲ್ಲವಂತೆ. ವ್ಯಕ್ತಿ ಬಗ್ಗೆಯೂ ಅವರಿಗೆ ತಿಳಿದಿರಲಿಲ್ಲವಂತೆ. ಆಕೆಗೆ ಯಾವುದೇ ರೋಗವಿದೆಯಾ ಎಂಬ ಬಗ್ಗೆಯೂ ಸರಿಯಾಗಿ ತಿಳಿದಿರಲಿಲ್ಲವೆಂದು ಕುಟುಂಬಸ್ಥರು ಹೇಳಿದ್ದಾರೆ.
ಬ್ರೆಜಿಲ್ ನಲ್ಲಿ 14 ವರ್ಷ ಮೇಲ್ಪಟ್ಟವರು ಶಾರೀರಿಕ ಸಂಬಂಧ ಬೆಳೆಸಬಹುದು. ಹಾಗಾಗಿ ಶಾರೀರಿಕ ಸಂಬಂಧ ಬೆಳೆಸಿದ ವ್ಯಕ್ತಿ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.