31 ವರ್ಷದ ಪೆರ್ಲಾ ಟಿಜೆರಿನಾ ಎಂಬ ಮಹಿಳೆ ಪ್ರಸ್ತುತ ಲ್ಯಾಟಿನ್ ಅಮೆರಿಕದ ಅತಿ ಎತ್ತರದ ಪರ್ವತವಾದ ಪಿಕೊ ಡಿ ಒರಿಜಾಬಾದಲ್ಲಿ ಸಮುದ್ರ ಮಟ್ಟದಿಂದ 18,491 ಅಡಿ ಎತ್ತರದಲ್ಲಿ ವಾಸಿಸುತ್ತಿದ್ದಾರೆ. 32 ದಿನಗಳ ಕಾಲ ಎತ್ತರದ ಜ್ವಾಲಾಮುಖಿಯ ಮೇಲೆ ಬದುಕುವುದು ಪೆರ್ಲಾ ಅವರ ಗುರಿಯಾಗಿದೆ. ಮೆಕ್ಸಿಕೋದ ಸಾಲ್ಟಿಲ್ಲೊದಿಂದ ಬಂದ ಮಹಿಳೆ ಈ ಭಯಾನಕ ಚಾಲೆಂಜ್ ಸ್ವೀಕರಿಸಿದ್ದಾರೆ.
“ನನ್ನ ಮಾನಸಿಕ ಶಕ್ತಿಯನ್ನು ಪರೀಕ್ಷಿಸಲು ನಾನು ಇಷ್ಟಪಡುತ್ತೇನೆ. ಇದು ಈ ದೊಡ್ಡ ಸವಾಲನ್ನು ನಿರ್ವಹಿಸಲು ನನಗೆ ದಾರಿ ಮಾಡಿಕೊಟ್ಟಿತು, ನಾನು ‘ಎತ್ತರದ ಮಹಿಳೆ’ ಎಂದು ಹೆಸರು ಮಾಡಬೇಕೆನ್ನುವ ಆಸೆ ಇದೆ ಎಂದಿದ್ದಾರೆ.
ದಿ ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, ಪೆರ್ಲ ಅವರು ಪರ್ವತಗಳಲ್ಲಿ ಹಿಂಸಾತ್ಮಕ ಗಾಳಿ, ವಿದ್ಯುತ್ ಬಿರುಗಾಳಿಗಳು, ಲಘೂಷ್ಣತೆ ಮತ್ತು ಅನಾರೋಗ್ಯವನ್ನು ಎದುರಿಸಿದ್ದಾರೆ. ಆದರೂ ಛಲ ಬಿಡದೇ ಮುನ್ನುಗ್ಗುತ್ತಿದ್ದಾರೆ. ಅವರು ಬೈಬಲ್ ಸೇರಿದಂತೆ ಓದಲು ಪುಸ್ತಕಗಳನ್ನು ಕೊಂಡೊಯ್ದಿದ್ದಾರೆ ಮತ್ತು ವಿಪರೀತ ಹವಾಮಾನವನ್ನು ಎದುರಿಸಲು ಆಗಾಗ್ಗೆ ಧ್ಯಾನ ಮಾಡುತ್ತಾರೆ.
“ನಾನು ಎಂದಿಗೂ ಒಬ್ಬಂಟಿಯಾಗಿರುವುದಿಲ್ಲ, ನಾನು ಓದಲು ಹಲವಾರು ಪುಸ್ತಕಗಳನ್ನು ಹೊಂದಿದ್ದೇನೆ ಮತ್ತು ನಾನು ಧ್ಯಾನ ಮಾಡುತ್ತೇನೆ. ನನ್ನನ್ನು ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ ದೃಢವಾಗಿಡಲು ನಾನು ಯಾವಾಗಲೂ ಓದುವ ಬೈಬಲ್ ನನ್ನಲ್ಲಿದೆ” ಎಂದಿದ್ದಾರೆ. ಅವರು ಯಶಸ್ಸು ಸಾಧಿಸಿ ಎಂದು ಹಲವರು ಪ್ರಾರ್ಥಿಸುತ್ತಿದ್ದಾರೆ. ವಿಶ್ವ ದಾಖಲೆ ಸಾಧಿಸಿ ಎಂದು ಹಾರೈಸುತ್ತಿದ್ದಾರೆ.
https://youtu.be/xyfMvz0Mk2Q