ಇದೀಗ ವೈರಲ್ ಆಗಿರುವ ವಿಡಿಯೋ ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ. ಮೇ 17 ರಂದು ಇಟಲಿಯ ಎಮಿಲಿಯಾ-ರೊಮ್ಯಾಗ್ನಾ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಹಲವಾರು ಪಟ್ಟಣಗಳು ಮತ್ತು ನಗರಗಳಲ್ಲಿ ಹಠಾತ್ ಪ್ರವಾಹ ಉಂಟಾಯ್ತು. ಪ್ರವಾಹದಿಂದ ಕನಿಷ್ಠ ಮೂರು ಜನರು ಸಾವನ್ನಪ್ಪಿದರು ಮತ್ತು ಮೂವರು ನಾಪತ್ತೆಯಾಗಿದ್ದಾರೆ. ಇಂತಹ ಸಮಯದಲ್ಲೂ ಆಪದ್ಭಾಂಧವರಂತೆ ಬಂದು ತಾಯಿ-ಮಗುವನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.
ಹೆಚ್ಚುತ್ತಿರುವ ಪ್ರವಾಹದ ನಡುವೆ ತಾಯಿ ಮತ್ತು ಮಗಳು ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದನ್ನು ನೋಡಿ, ನೆರೆಹೊರೆಯವರು ಅವರ ರಕ್ಷಣೆಗೆ ಬಂದಿದ್ದಾರೆ. ಏರುತ್ತಿರುವ ನೀರಿನ ಮಟ್ಟದ ನಡುವೆ ಸಿಕ್ಕಿಹಾಕಿಕೊಂಡಿದ್ದ ಮಗು ಮತ್ತು ತಾಯಿಯನ್ನು ರಕ್ಷಿಸಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಸಹಾಯಕ್ಕಾಗಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವಳನ್ನು ನೋಡಿದ ಇಬ್ಬರು ಪುರುಷರು ಅವಳ ಬಳಿಗೆ ಈಜಿದರು. ನಂತರ ಅವರಲ್ಲಿ ಒಬ್ಬರು ಮಗುವನ್ನು ಹಿಡಿದುಕೊಂಡು ಕುತ್ತಿಗೆಯ ಆಳದ ನೀರಿನ ಮೂಲಕ ಸಾಗಿದರೆ, ಇನ್ನೊಬ್ಬ ವ್ಯಕ್ತಿ ಮಹಿಳೆಯನ್ನು ಹಿಡಿದುಕೊಂಡು ಬಂದು ಸುರಕ್ಷಿತ ಸ್ಥಳವನ್ನು ತಲುಪುತ್ತಾರೆ. ಸದ್ಯ ಈ ವಿಡಿಯೋ ಮಾನವೀಯತೆ ಇರುವ ಬಗ್ಗೆ ಬೆಳಕು ಚೆಲ್ಲಿದೆ ಎಂದರೆ ತಪ್ಪಲ್ಲ.
https://twitter.com/okdasbooter1/status/1659326783387320320?ref_src=twsrc%5Etfw%7Ctwcamp%5Etweetembed%7Ctwterm%5E1659326783387320320%7Ctwgr%5E7122ae68b57e5eb3d72fea49c2d53e122c4483da%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbrave-neighbours-rescue-mother-daughter-from-rising-flood-waters-in-italy-video-2381238-2023-05-19