52 ವರ್ಷದ ವ್ಯಕ್ತಿಯ ಮಿದುಳು ಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು. ಅದು ಸರಿಯಾಗುವ ಎಲ್ಲ ಸಾಧ್ಯತೆಗಳನ್ನು ವೈದ್ಯರು ಕೈಚೆಲ್ಲಿದ್ದರು. ಆಗ ಮನೆಯವರು, ಆ ವ್ಯಕ್ತಿಯ ಇತರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವ ವಿಶಾಲತೆ ಹಾಗೂ ಮಾನವೀಯತೆ ಪ್ರದರ್ಶಿಸಿದರು.
ಇಂತ ಘಟನೆಗೆ ಗುರುಗ್ರಾಮದ ಫೊರ್ಟಿಸ್ ಮೆಮೊರಿಯಲ್ ಆಸ್ಪತ್ರೆ ಸಾಕ್ಷಿಯಾಯಿತು.
ಸುಲಭವಾಗಿ ಮಾಡಿ ಸವಿಯಿರಿ ʼತೆಂಗಿನಕಾಯಿʼ ರೈಸ್ ಬಾತ್
ಮಿದುಳು ಸತ್ತಿದ್ದ ವ್ಯಕ್ತಿಯ ಯಕೃತ್ ಮತ್ತು ಮೂತ್ರಪಿಂಡಗಳನ್ನು ಅನಾರೋಗ್ಯ ಪೀಡಿತ ಮೂವರು ರೋಗಿಗಳಿಗೆ ವೈದ್ಯರು ಅಳವಡಿಸುವ ಮೂಲಕ ಅವರ ಬಾಳಿನಲ್ಲಿ ಆಶಾಕಿರಣ ಮೂಡಿದೆ. ದಿಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ 60 ವರ್ಷದ ಮಹಿಳೆಗೆ ಒಂದು ಕಿಡ್ನಿ, 54 ವರ್ಷ ಪುರುಷರಿಗೆ ಮತ್ತೊಂದು ಕಿಡ್ನಿ, 51 ವರ್ಷದ ಮಹಿಳೆಗೆ ಯಕೃತ್ ಜೋಡಣೆ ಮಾಡಲಾಗಿದೆ.
ಹೃದಯಾಘಾತವಾದ ತಕ್ಷಣ ಮೊದಲು ಮಾಡಬೇಕಾದ್ದೇನು ಗೊತ್ತಾ…?
ಈ ಬಗ್ಗೆ ಮೆಚ್ಚುಗೆ ಸೂಚಿಸಿರುವ ಕಿಡ್ನಿ ಕಸಿ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಮಂಧಾನಿ ಅವರು, ’’ಅಂಗಾಂಗ ದಾನ ಮಾಡಿದವರಿಗೆ ನಾನು ಸೆಲ್ಯೂಟ್ ಮಾಡುವೆ. ಅವರ ಕುಟುಂಬಸ್ಥರು ಅಂಗಗಳ ಮಹತ್ವ ಎಷ್ಟಿದೆ ಎನ್ನುವುದನ್ನು ಅರಿತುಕೊಂಡಿದ್ದು ದೊಡ್ಡ ವಿಚಾರವೇ ಸರಿ. ಸುಮ್ಮನೆ ಸುಟ್ಟು ಹಾಕುವುದು ಅಥವಾ ಹೂಳುವ ಮೂಲಕ ಮಣ್ಣಾಗುವ ಅಂಗಗಳು ಈ ಜಗತ್ತಿನಲ್ಲಿ ಮತ್ತೊಬ್ಬ ಮನುಷ್ಯನ ಜೀವನ ಬೆಳಗಿಸಬಹುದು ಎನ್ನುವ ಅರಿವು ಹೆಚ್ಚಾಗಿ ಮೂಡಬೇಕಿದೆ. ಮೃತರು ತಮ್ಮ ಸಾವನ್ನು ಸಾರ್ಥಕ ಮಾಡುವ ಕಾರ್ಯ ಇದು ಎಂದು ನನಗನಿಸುತ್ತದೆ, ’’ ಎಂದಿದ್ದಾರೆ.
ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಕಣ್ತುಂಬಿಕೊಳ್ಳಲಿಚ್ಛಿಸುವ ಭಕ್ತರಿಗೆ ಗುಡ್ ನ್ಯೂಸ್
ಭಾರತದಲ್ಲಿ ಸದ್ಯ ಅಂಗಾಂಗ ದಾನದ ಪ್ರಮಾಣ ಪ್ರತಿ 10 ಲಕ್ಷ ಜನರ ಪೈಕಿ ಒಬ್ಬರು ಮಾತ್ರವೇ ಇದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರತಿ 10 ಲಕ್ಷ ಜನರ ಪೈಕಿ 30 ಮಂದಿ ಅಂಗಾಂಗ ದಾನ ಮಾಡುತ್ತಿದ್ದಾರೆ. ಸರಿಯಾದ ಅಂಗಾಂಗ ದಾನಿಗಳು ಸಿಗದೆಯೇ ಭಾರತದಲ್ಲಿ ಪ್ರತಿ ವರ್ಷ ಐದು ಲಕ್ಷ ಜನರು ಸಾಯುತ್ತಿದ್ದಾರಂತೆ.