
ಬಿಜೆಪಿ ಜಾತಿ ಅಸ್ತ್ರವನ್ನು ಬಳಸಿ ಮತ ಕೇಳುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡುವ ಭರದಲ್ಲಿ ಮುರಳಿಧರ್ ರಾವ್, ಬ್ರಾಹ್ಮಣರು ಹಾಗೂ ಬನಿಯಾ ಸಮುದಾಯದವರು ನನ್ನ ಎರಡು ಜೇಬಿನಲ್ಲಿ ಇದ್ದಾರೆ. ಬ್ರಾಹ್ಮಣರು ಪಕ್ಷಕ್ಕಾಗಿ ದುಡಿಯುತ್ತಿದ್ದಾಗ ಇದನ್ನು ಬ್ರಾಹ್ಮಣರ ಪಕ್ಷ ಎಂದು ಕರೆದರು. ಬನಿಯಾ ಸಮುದಾಯ ದುಡಿಯಲು ಆರಂಭಿಸಿದಾಗ ಬನಿಯಾಗಳ ಪಕ್ಷ ಎಂದು ಕರೆಲಾಯ್ತು. ಬಿಜೆಪಿ ಎಲ್ಲರಿಗಾಗಿಯೂ ಇರಲಿದೆ ಎಂದು ಹೇಳಿದ್ದಾರೆ.
ಮುರಳೀಧರ್ ರಾವ್ ಅವರ ಈ ಹೇಳಿಕೆಯ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ಕಾಂಗ್ರೆಸ್ ನಾಯಕ ಕಮಲ್ನಾಥ್ ಕಿಡಿಕಾರಿದ್ದಾರೆ. ಬಿಜೆಪಿಯು ಬ್ರಾಹ್ಮಣ ಹಾಗೂ ಬನಿಯಾ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಿದ್ದ ಮಧ್ಯ ಪ್ರದೇಶದ ಬಿಜೆಪಿ ಉಸ್ತುವಾರಿ ಇದೀಗ ಬ್ರಾಹ್ಮಣರು ನನ್ನ ಒಂದು ಜೇಬಿನಲ್ಲಿ ಬನಿಯಾದವರು ಇನ್ನೊಂದು ಜೇಬಿನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಈ ಸಮುದಾಯವನ್ನು ಪಕ್ಷದ ಒತ್ತೆಯಾಳು ಎಂಬಂತೆ ಬಿಂಬಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ಅವರು ಟ್ವೀಟಾಯಿಸಿದ್ರು.
ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಲು ಪ್ರಮುಖ ಪಾತ್ರ ವಹಿಸಿದ ಈ ವರ್ಗದ ನಾಯಕರಿಗೆ ಅವರು ಯಾವ ರೀತಿಯಲ್ಲಿ ಬೆಲೆ ಕೊಟ್ಟಂತಾಯ್ತು..? ಬಿಜೆಪಿ ನಾಯಕರು ಅಧಿಕಾರದ ಅಮಲು ಹಾಗೂ ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ. ಇದು ಇಡೀ ಬ್ರಾಹ್ಮಣ ಹಾಗೂ ಬನಿಯಾ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ನಿರ್ದಿಷ್ಟ ಸಮುದಾಯಗಳನ್ನು ಕೇಂದ್ರೀಕರಿಸಿ ಅವಮಾನಿಸುತ್ತಿರುವುದು ಯಾವ ರೀತಿಯ ಸಂಸ್ಕೃತಿಯಾಗಿದೆ..? ಬಿಜೆಪಿ ತನ್ನ ಅಧಿಕಾರದ ದಾಹಕ್ಕಾಗಿ ಯಾವ ಹಂತಕ್ಕೆ ಇಳಿಯಲು ಸಿದ್ಧವಿದೆ ಎಂದು ಟ್ವೀಟಾಸ್ತ್ರ ಪ್ರಯೋಗಿಸಿದ್ರು.