ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪಡಿತರ ವಿತರಣೆ ಕಾರ್ಯವನ್ನು ಈ ಹಿಂದೆ ಎನ್ಐಸಿ ತಂತ್ರಾಂಶದಿಂದ ನಿರ್ವಹಿಸಲಾಗುತ್ತಿತ್ತು.
ಆದರೆ, ರಾಜ್ಯಾದ್ಯಂತ ಅಕ್ಟೋಬರ್ ಮಾಹೆಯಿಂದ ಎನ್ಐಸಿ ತಂತ್ರಾಂಶದಿಂದ ಬೇರ್ಪಡಿಸಿ ಕರ್ನಾಟಕ ಸ್ಟೇಟ್ ಡೆಟಾ ಸೆಂಟರ್(ಕೆಎಸ್ಡಿಸಿ)ನಿಂದ ಪಡಿತರ ವಿತರಣೆ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ವರ್ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಈಗಾಗಲೇ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದ್ದು, ಕಾರ್ಡುದಾರರು ಆಂತಕಪಡುವ ಅಗತ್ಯವಿಲ್ಲ.
ಅಕ್ಟೋಬರ-2024ನೇ ಮಾಹೆಯ ಪಡಿತರ ವಿತರಣೆಯನ್ನು ನಿಗದಿತ ಅವಧಿಯೊಳಗಾಗಿ ಕಾರ್ಡುದಾರರಿಗೆ ವಿತರಿಸಲಾಗುವುದು. ಆದ್ದರಿಂದ ಕಾರ್ಡುದಾರರು ಆತಂಕಕ್ಕೆ ಒಳಗಾಗಬಾರದೆಂದು ಧಾರವಾಡ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.