ಬೆಂಗಳೂರು: ಶ್ರೀಮಂತರು ಅಕ್ರಮವಾಗಿ ಪಡೆದುಕೊಂಡಿದ್ದ ಸುಮಾರು 85 ಸಾವಿರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ತೆರಿಗೆ ಪಾವತಿಸುತ್ತಿದ್ದವರೂ ಕೂಡ ಪಡಿತರ ಚೀಟಿ ಪಡೆದುಕೊಂಡಿದ್ದು, ಅಂತವರಿಗೆ ಆಹಾರ ಇಲಾಖೆ ಶಾಕ್ ನೀಡಿದೆ.
ಆದಾಯ ತೆರಿಗೆ ಇಲಾಖೆಯ ನೆರವಿನೊಂದಿಗೆ ಆಹಾರ ಇಲಾಖೆ ಕ್ರಮ ಜರುಗಿಸಿದೆ. 85 ಸಾವಿರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ತೆರಿಗೆ ಪಾವತಿಸುವವರ ಜಿಲ್ಲಾವಾರು ಮಾಹಿತಿ ಪಡೆದು ಆದಾಯ ತೆರಿಗೆ ಮತ್ತು ಪಡಿತರ ಚೀಟಿಯಲ್ಲಿರುವ ಆಧಾರ್ ಸಂಖ್ಯೆಯನ್ನು ಆಧರಿಸಿ ಪಟ್ಟಿ ಸಿದ್ಧಪಡಿಸಿ ಸುಮಾರು 85 ಸಾವಿರ ಹರಹರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ.
ಸುಳ್ಳು ಮಾಹಿತಿ ಕೊಟ್ಟು ಅನರ್ಹರು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದು ಅಂತವರಿಗೆ ಕಾರ್ಡ್ ಮರಳಿಸಲು ಅವಕಾಶ ನೀಡಲಾಗಿತ್ತು. ಆದರೂ ಹೆಚ್ಚಿನವರು ಮರಳಿಸದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಪರಿಶೀಲನೆ ನಡೆಸಿದ್ದು, ಈ ಅವಧಿಯಲ್ಲಿ ಪತ್ತೆಯಾದ ಅನರ್ಹರ ಕಾರ್ಡ್ ರದ್ದು ಮಾಡಲಾಗಿದೆ.