ಬೆಂಗಳೂರು: ನಿಯಮ ಉಲ್ಲಂಘಿಸಿ ಪಡೆದುಕೊಂಡಿದ್ದ 91,061 ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವವರು, ವಾರ್ಷಿಕ 1.20 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿದದವರು, ಸರ್ಕಾರಿ ನೌಕರರು, ಮೃತ ಫಲಾನುಭವಿಗಳು, ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದ ಕಾರ್ಡುಗಳನ್ನು ಗುರುತಿಸಿದ ಆಹಾರ ಇಲಾಖೆ ರದ್ದು ಮಾಡಿದೆ.
2023 -24 ರಲ್ಲಿ 74,342, 2024 -25ರಲ್ಲಿ 16,719 ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಹೆಚ್.ಆರ್.ಎಂ.ಎಸ್. ಮಾಹಿತಿ ಆಧರಿಸಿ 5000ಕ್ಕೂ ಅಧಿಕ ಸರ್ಕಾರಿ ನೌಕರರು ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು, ಈ ನೌಕರರಿಗೆ ನೋಟಿಸ್ ಜಾರಿ ಮಾಡಿ ಮಾಹಿತಿ ಸಲ್ಲಿಕೆಗೆ ಸೂಚಿಸಲಾಗಿದೆ.