ಬೆಂಗಳೂರು: ರದ್ದಾಗಿರುವ ಎಲ್ಲಾ ಬಿಪಿಎಲ್ ಕಾರ್ಡ್ ಗಳನ್ನು ವಾರದೊಳಗೆ ಮರುಸ್ಥಾಪನೆ ಮಾಡುವುದಾಗಿ ಸರ್ಕಾರ ಹೇಳಿದ್ದರೂ ಸಾಧ್ಯವಾಗಿಲ್ಲ. ಸೋಮವಾರಕ್ಕೆ ಈ ಕುರಿತು ಹಾಕಿಕೊಂಡಿದ್ದ ಗಡುವು ಮುಕ್ತಾಯವಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 15 ದಿನ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಲಾಗಿದೆ.
ಈಗಾಗಲೇ ಅಮಾನತು ಮಾಡಿರುವ ಪಡಿತರ ಚೀಟಿಗಳ ಮರುಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ರದ್ದಾಗಿರುವ ಮತ್ತು ಅಮಾನತಿನಲ್ಲಿ ಇಡಲಾಗಿರುವ ಕಾರ್ಡ್ ಗಳನ್ನು ಬಿಪಿಎಲ್ ಕಾರ್ಡ್ ಗಳಾಗಿ ಮರುಸ್ಥಾಪನೆ ಮಾಡಲು ಕೇವಲ 3-4 ದಿನಗಳಲ್ಲಿ ಸಾಧ್ಯವಿಲ್ಲ. ಎನ್ಐಸಿ ತಂತ್ರಾಂಶದ ಮೂಲಕ ಮರುಸ್ಥಾಪನೆ ಮಾಡಲು ಮತ್ತು ಅಮಾನತಾಗಿರುವ ಕಾರ್ಡ್ ಗಳನ್ನು ಆಕ್ಟಿವ್ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಪ್ರಕ್ರಿಯೆ ನಡೆಯಲಿದೆ.
ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ ಕಾರ್ಡ್ ಗಳನ್ನು ರದ್ದುಪಡಿಸಲಾಗುವುದು. ಉಳಿದವರ ಕಾರ್ಡ್ ಗಳ ಮರು ಸ್ಥಾಪನೆ ಕಾರ್ಯ ತಂತ್ರಾಂಶದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕರು, ಉಪನಿರ್ದೇಶಕರ ಲಾಗಿನ್ ನಲ್ಲಿ ಅವಕಾಶ ನೀಡಲಾಗಿದೆ. ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾಯಿಸಿದ ಕಾರ್ಡ್ ಗಗಳನ್ನು ಕೂಡ ಪುನಃ ಬಿಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಇನ್ನೂ 15 ದಿನ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಲಾಗಿದೆ.