ಬಂಡವಾಳ ವಿನಿಯೋಗ ಅರಸಿ ಹೊರಟ ಭಾರತ್ ಪೆಟ್ರೋಲಿಯಂ ಕಾರ್ಪ್ ನಿಯಮಿತ (ಬಿಪಿಸಿಎಲ್), ಅಡುಗೆ ಅನಿಲದ (ಎಲ್‌ಪಿಜಿ) ಮೇಲೆ ಸಬ್ಸಿಡಿ ಕೊಡುವ ಕೇಂದ್ರ ಸರ್ಕಾರದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ ಚಾಲನೆ ಕೊಟ್ಟಿದೆ.
ಮಾರಾಟಕ್ಕಿರುವ ಸರ್ಕಾರದ ಪಾಲಿನ ತನ್ನ ಶೇರುಗಳ ಖರೀದಿ ಮಾಡುವವರಿಗೆ, ಅಡುಗೆ ಅನಿಲದ ಮೇಲೆ ಗ್ರಾಹಕರಿಗೆ ಸರ್ಕಾರದ ಸಬ್ಸಿಡಿ ಯೋಜನೆ ಅನುಷ್ಠಾನಕ್ಕೆ ಅನುವಾಗಲು ಬಿಪಿಸಿಎಲ್ ಈ ಹೆಜ್ಜೆ ಇಟ್ಟಿದೆ ಎಂದು ಘಟನೆಯನ್ನು ಹತ್ತಿರದಿಂದ ಕಂಡ, ಹೆಸರು ಹೇಳಲಿಚ್ಛಿಸದ, ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಪ್ರಕಾರ, ಸರ್ಕಾರದ ಹಿಡಿತದಲ್ಲಿರುವ ಬಿಪಿಸಿಎಲ್‌ನ 52.98% ಶೇರುಗಳನ್ನು ಖರೀದಿ ಮಾಡಲಿರುವವರು ಪ್ರತ್ಯಕ್ಷ ಹಸ್ತಾಂತರಿತ ಲಾಭ (ಡಿಬಿಟಿ) ಯೋಜನೆಯನ್ನೂ ಸಹ ಮುಂದುವರೆಸಬೇಕಿದೆ. ಈ ಮೂಲಕ ಅಡುಗೆ ಅನಿಲ ಸಬ್ಸಿಡಿ ಫಲಾನುಭವಿಗಳಿಗೂ ಅನಿಲ ಪೂರೈಸುವ ಹೊಣೆಗಾರಿಕೆ ಶೇರುಗಳ ಖರೀದಿದಾರರ ಮೇಲೆ ಬೀಳುತ್ತದೆ.
ಸಂಸ್ಥೆಯ ನಿರ್ವಹಣಾ ನಿಯಂತ್ರಣದ ವರ್ಗಾವಣೆಯೂ ಒಳಗೊಂಡಂತೆ, ಬಿಪಿಸಿಎಲ್‌ನಲ್ಲಿರುವ ತನ್ನ 52.98% ಶೇರುಗಳನ್ನು ವ್ಯೂಹಾತ್ಮಕ ಖರೀದಿದಾರರಿಗೆ ಮಾರಾಟ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ಶಿಕ್ಷಕಿ, ಪುತ್ರನ ಬರ್ಬರ ಹತ್ಯೆ: ಹಂತಕರಿಗೆ ಬಲೆ ಬೀಸಿದ ಖಾಕಿ
ದೇಶದ ಅಗ್ರ ತೈಲ ಪೂರೈಕೆದಾರರಲ್ಲಿ ಒಂದಾದ ಬಿಪಿಸಿಎಲ್ ಶೇರುಗಳ ಖರೀದಿ ಮಾಡಿದವರಿಗೆ ಭಾರತದ ಇಂಧನ ರೀಟೇಲ್ ಕ್ಷೇತ್ರದ ಮಾರುಕಟ್ಟೆಯ 25.77% ಪಾಲು ಸಿಗಲಿದ್ದು, ರೀಫೈನಿಂಗ್ ಸಾಮರ್ಥ್ಯ 15.3%ರಷ್ಟರ ಮೇಲೆ ಹಿಡಿತ ಸಿಗಲಿದೆ.
ಮುಂಬೈ, ಕೊಚ್ಚಿ, ಬಿನಾ ಹಾಗೂ ನುಮಾಲಿಘರ್‌ನಲ್ಲಿ ರೀಫೈನಿಂಗ್ ಸೌಲಭ್ಯಗಳನ್ನು ನಿರ್ವಹಿಸುವ ಬಿಪಿಸಿಎಲ್, ಇವುಗಳಿಂದ ವಾರ್ಷಿಕ 38.3 ದಶಲಕ್ಷ ಟನ್‌ಗಳಷ್ಟು ಕಚ್ಛಾ ತೈಲ ರೀಫೈನ್ ಮಾಡುತ್ತವೆ.
ಪಹಲ್ ಯೋಜನೆ ಮುಖಾಂತರ ಅಡುಗೆ ಅನಿಲದ ಮೇಲೆ ಸಬ್ಸಿಡಿ ನೀಡುತ್ತಿರುವ ಕೇಂದ್ರ ಸರ್ಕಾರವು, ಎಲ್‌ಪಿಜಿಯ ಮಾರುಕಟ್ಟೆ ಬೆಲೆ ಹಾಗೂ ಸಬ್ಸಿಡಿ ಬೆಲೆಯ ಅಂತರವನ್ನು ಪಾವತಿ ಮಾಡಿಕೊಂಡು ಬಂದಿದೆ.
ಇಂಧನ ಸಬ್ಸಿಡಿಗೆಂದೇ 2011-12ರಿಂದಲೂ ಕೇಂದ್ರ ಸರ್ಕಾರವು 7.03 ಲಕ್ಷ ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಗೆ ನೇರವಾಗಿ ಲಿಂಕ್ ಮಾಡಿದ್ದರೆ ದೇಶೀ ಎಲ್‌ಪಿಜಿ ಬಳಕೆದಾರರಿಗೆ ಸರ್ಕಾರವು ಸಬ್ಸಿಡಿ ಕೊಡುತ್ತಾ ಬಂದಿದೆ.