ಬೆಂಗಳೂರು: ಮನೆಯಲ್ಲಿ ಯಾರಾದರೂ ತುಂಬಾ ಕೋಪಿಷ್ಟರಿದ್ದರೆ, ಯಾವಾಗಲೂ ಬೈಯ್ಯುತ್ತಿದ್ದರೆ ಅಥವಾ ಆಫೀಸ್ ನಲ್ಲಿ ಬಾಸ್ ಸಿಟ್ಟು ಮಾಡಿಕೊಂಡರೆ ರೇಗಾಡಿದರೆ ಅವರಿಗೆ ಬಿಪಿ ಜಾಸ್ತಿ ಇದೆ ಎಂದು ಮಾತನಾಡಿಕೊಳ್ಳುವುದು ಸಹಜ.
ಹಾಗಾದರೆ ಬಿಪಿ ಇದ್ದವರಿಗೆ ಕೋಪ ಜಾಸ್ತಿ ಬರುತ್ತಾ? ಅತಿಯಾದ ಕೋಪ ಬಿಪಿ ಬರಲು ಕಾರಣವಾಗುತ್ತಾ? ಕೋಪಕ್ಕೂ ಬಿಪಿಗೂ ಏನು ಸಂಬಂಧ? ಎಂಬ ಹಲವಾರು ಪ್ರಶ್ನೆಗಳಿಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿಯನ್ನು ತಿಳಿಸಿದ್ದಾರೆ.
ಒಂದು ಸತ್ಯ ಸಂಗತಿಯೆಂದರೆ ತುಂಬಾ ದಿನಗಳ ಅಥವಾ ವರ್ಷಗಟ್ಟಲೇ ಕಂಟ್ರೋಲ್ ಗೆ ಬಾರದ ಕೋಪ ಅಥವಾ ಅನ್ ಕಂಟ್ರೋಲ್ಡ್ ಕೋಪವಿದ್ದರೆ ಅದು ನಿಮ್ಮಲ್ಲಿ ಬ್ಲಡ್ ಪ್ರೆಶರ್ ಹೆಚ್ಚಾಗಲು, ಬಿಪಿ ಹೆಚ್ಚಾಗುವಂತೆ ಮಾಡಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಗಾದರೆ ಕೋಪದಿಂದ ವ್ಯಕ್ತಿಯಲ್ಲಿ ಬಿಪಿ ಹೇಗೆ ಬರಬಹುದು? ಕೋಪ ಮಾಡಿಕೊಂಡಾಗ ನಮ್ಮಲ್ಲಿ ಆಗುವ ಬದಲಾವಣೆಗಳೇನು ಎಂಬ ಇಂಟ್ರೆಸ್ಟಿಂಗ್ ವಿಚಾರವನ್ನು ಡಾ.ರಾಜು ವಿವರಿಸಿದ್ದಾರೆ.
ಡಾ.ರಾಜು ಅವರ ಈ ಮಹತ್ವದ ಆರೋಗ್ಯ ಸಲಹೆ ಕುರಿತ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.