ಚಿತ್ರದುರ್ಗ : ನಗರದ ಹೊರವಲಯದಲ್ಲಿ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾದ ಐದು ಅಸ್ಥಿಪಂಜರಗಳನ್ನು2 ತಿಂಗಳ ಮೊದಲೇ ಕೆಲವು ಹುಡುಗರು ವಿಡಿಯೋ ಮಾಡಿ ವೈರಲ್ ಮಾಡಿದ್ದರು ಎಂಬ ಶಾಕಿಂಗ್ ಮಾಹಿತಿ ಬಯಲಾಗಿದೆ.
ಇದು 2 ತಿಂಗಳ ಹಿಂದೆಯಷ್ಟೇ ಹುಡುಗರ ಗಮನಕ್ಕೆ ಬಂದಿತ್ತು, ಇದನ್ನು ನೋಡಿದ ಹುಡುಗರು ವಿಡಿಯೋ ಮಾಡಿ ವೈರಲ್ ಮಾಡಿದ್ದರು. ಅಸ್ಥಿಪಂಜರದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಸ್ಥಿಪಂಜರಗಳನ್ನು ಎಣಿಸುತ್ತಾ ಮಕ್ಕಳು ಓಡಾಡುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಕ್ಕಳು ಮನೆಯೊಳಗೆ ಹೇಗೆ ಬಂದರು..? ಅವರಿಗೆ ವಿಷಯ ಹೇಗೆ ಗೊತ್ತಾಯಿತು..? ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹೇಗ್ ಅಪ್ ಲೋಡ್ ಆಯಿತು ಎಂದು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಹಳೇ ಬೆಂಗಳೂರು ರಸ್ತೆಯ ಕಾರಾಗೃಹ ಬಳಿ ಇರುವ ಪಾಳು ಬಿದ್ದಿರುವ ಮನೆಯಲ್ಲಿ 5 ಮನುಷ್ಯನ ಅಸ್ಥಿಪಂಜರಗಳ ಜೊತೆಗೆ ನಾಯಿಯ ಅಸ್ಥಿ ಪಂಜರವು ಪತ್ತೆಯಾಗಿತ್ತುನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ನಿವಾಸದಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.