ಪ್ರತಿಯೊಂದು ಸಂಬಂಧ ಪ್ರೀತಿ ಹಾಗೂ ವಿಶ್ವಾಸದ ಮೇಲೆ ನಿಂತಿರುತ್ತದೆ. ಪತಿ-ಪತ್ನಿ ಸಂಬಂಧವಾಗಿರಲಿ ಇಲ್ಲ ಬಾಯ್ಫ್ರೆಂಡ್, ಗರ್ಲ್ಫ್ರೆಂಡ್ ಸಂಬಂಧವಾಗಿರಲಿ ಎಲ್ಲ ಸಂಬಂಧಕ್ಕೂ ಪ್ರೀತಿ ಜೊತೆಗೆ ವಿಶ್ವಾಸ ಮುಖ್ಯ.
ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಸ್ವಭಾವವಿರುತ್ತದೆ. ಈ ಸ್ವಭಾವ ಕೆಲವೊಮ್ಮೆ ಸಂಬಂಧವನ್ನು ಹಾಳು ಮಾಡುತ್ತದೆ.
ಹುಡುಗಿಯರಲ್ಲಿರುವ ಕೆಲವೊಂದು ಸ್ವಭಾವವನ್ನು ಹುಡುಗ್ರು ಎಂದೂ ಇಷ್ಟಪಡುವುದಿಲ್ಲ. ಹುಡುಗ್ರು ಇಷ್ಟಪಡದ ಸ್ವಭಾವವನ್ನು ಹುಡುಗಿಯರು ಬದಲಾಯಿಸಿಕೊಂಡ್ರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ಕೆಲವು ಹುಡುಗಿಯರು ತಮ್ಮ ಸಂಗಾತಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಿರುತ್ತಾರೆ. ಸಂಗಾತಿ ಮಾಡುವ ಪ್ರತಿಯೊಂದು ಕೆಲಸದ ಬಗ್ಗೆಯೂ ತಮಗೆ ತಿಳಿದಿರಬೇಕು ಎನ್ನುತ್ತಾರೆ. ಆದ್ರೆ ಇದು ಹುಡುಗರಿಗೆ ಇಷ್ಟವಾಗುವುದಿಲ್ಲ. ಇದೇ ಕಾರಣಕ್ಕೆ ಸಂಗಾತಿಗಳ ನಡುವೆ ಜಗಳ ನಡೆಯುತ್ತದೆ.
ಡಿಜಿಟಲ್ ಯುಗದಲ್ಲಿ ಮೊಬೈಲ್ ಕಾಮನ್. ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವ ಹುಡುಗಿಯರು ಆಗಾಗ ಸಂಗಾತಿಗೆ ಸಂದೇಶ ಕಳುಹಿಸುತ್ತಿರುತ್ತಾರೆ. ತಮ್ಮ ಸಂಗಾತಿ ಕೂಡ ಸಂದೇಶ, ಫೋಟೋ ಕಳಿಸಬೇಕೆಂದು ಬಯಸುತ್ತಾರೆ. ಆದ್ರೆ ಪದೇ ಪದೇ ಸಂದೇಶ ಕಳುಹಿಸುವುದು, ಚಾಟ್ ಮಾಡುವುದು ಹುಡುಗರಿಗೆ ಇಷ್ಟವಾಗುವುದಿಲ್ಲ.
ಹುಡುಗಿಯರು ಭಾವುಕರಾಗಿರುತ್ತಾರೆ. ಸಣ್ಣ-ಸಣ್ಣ ವಿಷಯಕ್ಕೂ ಅಳುವ ಹುಡುಗಿಯರಿದ್ದಾರೆ. ಅಳುವುದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಕೆಲಸ ಸಾಧಿಸಿಕೊಳ್ತಾರೆ. ಬ್ಲಾಕ್ ಮೇಲ್ ಮಾಡಿ ಹುಡುಗರನ್ನು ಇಕ್ಕಟ್ಟಿಗೆ ಸಿಲುಕಿಸುವ ಹುಡುಗಿಯರನ್ನು ಕಂಡ್ರೆ ಅನೇಕ ಹುಡುಗರಿಗೆ ಆಗೋದಿಲ್ಲ. ಅವರಿಂದ ದೂರ ಹೋಗ್ತಾರೆ ಹುಡುಗ್ರು.
ಕೆಲ ಹುಡುಗಿಯರು ಸಂಗಾತಿಯನ್ನು ಸದಾ ಸಂಶಯದಿಂದ ನೋಡ್ತಾರೆ. ಅವರ ಫೋನ್ ಚೆಕ್ ಮಾಡುತ್ತಿರುತ್ತಾರೆ. ಆದ್ರೆ ಇದು ಹುಡುಗರಿಗೆ ಆಗಿಬರೋದಿಲ್ಲ.
ಸಂಗಾತಿ ಮುಂದೆ ತಮ್ಮ ಹಕ್ಕು ಮಂಡಿಸುವ ಹುಡುಗಿಯರೂ ಹುಡುಗರಿಗೆ ಇಷ್ಟವಾಗುವುದಿಲ್ಲ. ಕೆಲ ಹುಡುಗಿಯರು ತಮ್ಮ ಸಂಗಾತಿ ಯಾರ ಜೊತೆಯೂ ಮಾತನಾಡಬಾರದು ಎನ್ನುತ್ತಾರೆ. ಕುಟುಂಬಸ್ಥರು, ಸ್ನೇಹಿತರ ಜೊತೆ ಬೆರೆಯಲು ಬಿಡುವುದಿಲ್ಲ. ಅಂಥವರಿಂದ ದೂರ ಇರ್ತಾರೆ ಹುಡುಗ್ರು.