ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಮತ್ತೊಬ್ಬ ಬಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಚಂದ್ರು ಸಾವನ್ನಪ್ಪಿದ ಬಾಲಕ. ಎರಡು ದಿನಗಳ ಹಿಂದೆ ಸುಪ್ರೀತ್ ಎಂಬ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ಘಟನೆ ನಡೆದಿದ್ದು, ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್ ಸ್ಪರ್ಶವಾಗಿ ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದವು. ಮೈಮೇಲೆ ಸುಟ್ಟ ಗಾಯಗಳಾಗಿದ್ದ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಚಂದ್ರು ಮತ್ತು ಸುಪ್ರೀತ್ ಕೊನೆಯುಸಿರೆಳೆದಿದ್ದಾರೆ.