ಬ್ರಿಟನ್ ನಲ್ಲಿ ಪ್ರೇಮಿಯೊಬ್ಬ, ತನ್ನ ಪ್ರಿಯತಮೆಯ ಕೊನೆ ಆಸೆ ಈಡೇರಿಸಿದ್ದಾನೆ. ಐಸಿಯುವಿನಲ್ಲಿ ಮದುವೆಯಾಗಿದ್ದಾನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹುಡುಗಿ, ಆಸ್ಪತ್ರೆ ಸೇರಿದ್ದಳು.
34 ವರ್ಷದ ಗ್ರೆಗ್ ಪೀಟರ್ಸ್ ಮತ್ತು 28 ವರ್ಷದ ಅನ್ನಾ ಲೆಗರ್ ಪ್ರೀತಿಸುತ್ತಿದ್ದರು. 18 ತಿಂಗಳ ಹಿಂದೆ ಭೇಟಿಯಾಗಿದ್ದರೂ ಇಬ್ಬರ ಮಧ್ಯೆ ಪ್ರೀತಿ ಅಗಾಧವಾಗಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರ ಮದುವೆಗೆ ಎರಡೂ ಕುಟುಂಬಗಳು ಒಪ್ಪಿದ್ದವು. ಆದ್ರೆ ಅವರಿಗೆ ಒಟ್ಟಾಗಿ ಬಾಳುವ ಭಾಗ್ಯವಿರಲಿಲ್ಲ.
ಕಚೇರಿಯಿಂದ ವಾಪಸ್ ಆಗ್ತಿದ್ದ ವೇಳೆ ಅನ್ನಾ ಕಾರ್ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಆಕೆಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾಕ್ಕೆ ಹೋಗಿದ್ದ ಆಕೆಯನ್ನು ವೈದ್ಯರು ಐಸಿಯುಗೆ ಶಿಫ್ಟ್ ಮಾಡಿದ್ದರು. ಇದ್ರಿಂದ ಪೀಟರ್ಸ್ ಆಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಆಕೆಯನ್ನು ಪತ್ನಿ ರೂಪದಲ್ಲಿ ನೋಡಬಯಸಿದ್ದ. ಹಾಗಾಗಿ ಐಸಿಯುವಿನಲ್ಲಿ,ಕುಟುಂಬಸ್ಥರ ಮುಂದೆ ರಿಂಗ್ ಬದಲಿಸಿದ್ದಾನೆ. ಮದುವೆಯಾದ ಕೆಲವೇ ಸಮಯದಲ್ಲಿ ಅನ್ನಾ ಸಾವನ್ನಪ್ಪಿದ್ದಾಳೆ.
ಆಕೆ ಜೊತೆ ಸುಂದರ ಜೀವನದ ಕನಸು ಕಂಡಿದ್ದೆ. ಆದ್ರೆ ಎಲ್ಲವೂ ಬದಲಾಯ್ತು. ಕೊನೆಯಲ್ಲಿ ಆಕೆಯನ್ನು ಪತ್ನಿ ರೂಪದಲ್ಲಿ ನೋಡಬಯಸಿದ್ದೆ ಎಂದು ಪೀಟರ್ಸ್ ಹೇಳಿದ್ದಾನೆ. ಅನ್ನಾಳ ಅಂಗಗಳನ್ನು ದಾನ ಮಾಡಲಾಗಿದ್ದು, 6 ಮಂದಿ ಜೀವ ಉಳಿಸಲಾಗಿದೆ.