
ಫೆಬ್ರವರಿ 5ರಂದು ಕಾಶ್ಮೀರಿಗಳು ಕಾಶ್ಮೀರ ದಿನ ಆಚರಣೆ ಮಾಡುವ ಸಂದರ್ಭದಲ್ಲಿ ಗಿರಾಕಿಗಳನ್ನು ಸೆಳೆಯುವ ತನ್ನದೊಂದು ಯತ್ನವಾಗಿ ಕಾಶ್ಮೀರವು ಕಾಶ್ಮೀರಿಗಳದ್ದು ಎಂಬ ಪೋಸ್ಟರ್ ಒಂದನ್ನು ಶೇರ್ ಮಾಡಿರುವ ಕೆ.ಎಫ್.ಸಿ. ಭಾರೀ ವಿವಾದಕ್ಕೆ ಸಿಲುಕಿದೆ.
ಫಾಸ್ಟ್ ಪುಡ್ ದಿಗ್ಗಜ ಕೆಎಫ್‌ಸಿ, ಕಾಶ್ಮೀರಿಗಳ ಭಾವನೆಗಳೊಂದಿಗೆ ತಾನಿದ್ದೇನೆ ಎಂದು ತೋರಿಸಿಕೊಳ್ಳಲು ಹೋಗಿ ಭಾರೀ ಫಜೀತಿಗೆ ಸಿಲುಕಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಲೇ ವೈರಲ್ ಆಗಿರುವ ಈ ಸಂದೇಶದ ಬೆನ್ನಿಗೇ ಕೆಎಫ್‌ಸಿ ಬಹಿಷ್ಕರಿಸಿ ಎಂಬ ಕರೆಯ ಅಭಿಯಾನ ಜೋರಾಗಿದ್ದು, ಆನ್ಲೈನ್‌ನಲ್ಲಿ #BoycottKFC ಟ್ರೆಂಡ್ ಆಗುತ್ತಿದೆ.
BIG BREAKING: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ; ನಿಷೇಧಾಜ್ಞೆ ಜಾರಿ
ನೆಟ್ಟಿಗರಿಂದ ತೀವ್ರ ಕೋಪ ಎದುರಿಸಿದ ಬೆನ್ನಿಗೇ ಈ ಪೊಸ್ಟ್ ಹಿಂಪಡೆದ ಕೆಎಫ್‌ಸಿ ಇಂಡಿಯಾ ಸೋಮವಾರ ಈ ಸಂಬಂಧ ಕ್ಷಮೆಯಾಚಿಸಿದ್ದು, “ಸಾಮಾಜಿಕ ಜಾಲತಾಣದಲ್ಲಿ ಕೆಎಫ್‌ಸಿಯ ಚಾನೆಲ್‌ಗಳಲ್ಲಿ ಪ್ರಕಟವಾದ ಪೋಸ್ಟ್ ವಿಚಾರವಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಭಾರತವನ್ನು ಗೌರವಿಸುತ್ತೇವೆ ಹಾಗೂ ಭಾರತೀಯರಿಗೆ ಗರ್ವದಿಂದ ಸೇವೆ ಸಲ್ಲಿಸಲು ಇಚ್ಛಿಸುತ್ತೇವೆ,” ಎಂದು ಟ್ವೀಟ್ ಮಾಡಿದೆ.
“ಇನ್ನೆಂದೂ ಕೆಎಫ್‌ಸಿಗೆ ಹೋಗೋದಿಲ್ಲ,” ಶಪಥಗೈದ ನೆಟ್ಟಿಗರು #BoycottKFC ಟ್ರೆಂಡ್ ಅಡಿ ತಮ್ಮ ಸಿಟ್ಟು ಕಾರಿಕೊಂಡಿದ್ದಾರೆ.