ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರುಖ್ 5 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಇದೀಗ ‘ಬಾಯ್ಕಾಟ್ ಶಾರುಖ್ ಖಾನ್’ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಪಾಕಿಸ್ತಾನ ಕ್ರಿಕೆಟಿಗರು ವಿಶ್ವದಲ್ಲಿಯೇ ಶ್ರೇಷ್ಠ ಆಟಗಾರರು ಹಾಗೂ ಪಾಕ್ ಕ್ರಿಕೇಟಿಗರು ಚಾಂಪಿಯನ್ ಗಳು ಎಂದು ಈ ಹಿಂದೆ ಶಾರುಖ್ ನೀಡಿದ್ದ ಹೇಳಿಕೆಗಳು ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಶಾರುಖ್ ಅವರನ್ನು ಬಾಯ್ಕಾಟ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING: ಹೈದರಾಬಾದ್ ಅಪ್ತಾಪ್ತೆಯ ಅತ್ಯಾಚಾರ – ಕೊಲೆ ಪ್ರಕರಣದ ಆರೋಪಿ ಶವವಾಗಿ ಪತ್ತೆ
ಇದೇ ವೇಳೆ ಶಾರುಖ್ ವಿರುದ್ಧ ಹಲವಾರು ವಿಚಾರಗಳನ್ನು ಆಕ್ರೋಶದ ಮೂಲಕ ಹೊರ ಹಾಕಿರುವ ನೆಟ್ಟಿಗರು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆ, ಸುಶಾಂತ್ ಸಿಂಗ್ ರಜಪೂತ್ ಚಿತ್ರಕ್ಕೆ ಶಾರುಖ್ ಬೆಂಬಲ ನೀಡದಿರುವ ವಿಚಾರ, ಕರಣ್ ಜೋಹರ್, ಜಾಹ್ನವಿ ಚಿತ್ರಕ್ಕೆ ಬೆಂಬಲ ನೀಡಿದ್ದು, ಇಮ್ರಾನ್ ಖಾನ್ ಅವರೊಂದಿಗಿನ ಶಾರುಖ್ ಫೋಟೋ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಶಾರುಖ್ ಖಾನ್ ವಿರುದ್ಧ ಸಾಧ್ವಿ ಪ್ರಾಚಿ ವಾಗ್ದಾಳಿ ನಡೆಸಿದ್ದು, ಶಾರುಖ್ ಹಿಂದೂಸ್ತಾನದ ಅನ್ನ ತಿನ್ನುತ್ತಾರೆ. ಆದರೆ ಪಾಕಿಸ್ತಾನದ ಹಾಡು ಹಾಡುತ್ತಾರೆ ಎಂದು ಕಿಡಿಕಾರಿದ್ದಾರೆ.