ನಟಿ ರಿಚಾ ಚಡ್ಡಾ ಅವರ ಟ್ವೀಟ್ ಒಂದು ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಅವರ ಮುಂದಿನ ಚಲನ ಚಿತ್ರಕ್ಕೆ ಆಪತ್ತು ಎದುರಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರುಪಡೆಯಲು ಭಾರತೀಯ ಸೇನೆಯು “ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ” ಎಂಬ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ನಟಿ ವ್ಯಂಗ್ಯಭರಿತ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸುಮಾರು 35-40 ಸೈನಿಕರನ್ನು ಕಳೆದುಕೊಂಡಿದ್ದರೆ, 2020 ರ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ 20 ಭಾರತೀಯ ಸೇನೆಯ ಸೈನಿಕರ ಹತ್ಯೆಯಾಗಿತ್ತು. ಈ ಘಟನೆ ಉಲ್ಲೇಖಿಸಿ, “ಗಲ್ವಾನ್ ಸೇಸ್ ಹಾಯ್” ಎಂದು ರಿಚಾ ಕುಹಕವಾಡಿದ್ದರು.
ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲವು ಭಾಗಗಳನ್ನು ಹಿಂಪಡೆಯುವ ಸುಳಿವು ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಇತ್ತೀಚಿನ ಹೇಳಿಕೆಗೆ ದ್ವಿವೇದಿ ಪ್ರತಿಕ್ರಿಯಿಸಿದರು.
“ಭಾರತೀಯ ಸೇನೆಗೆ ಸಂಬಂಧಿಸಿದಂತೆ, ಭಾರತ ಸರ್ಕಾರ ನೀಡುವ ಯಾವುದೇ ಆದೇಶವನ್ನು ಅದು ನಿರ್ವಹಿಸುತ್ತದೆ. ಅದಕ್ಕೆ ನಾವು ಸದಾ ಸಿದ್ಧರಿದ್ದೇವೆ,’’ ಎಂದು ದ್ವಿವೇದಿ ಹೇಳಿದ್ದರು.
ರಿಚಾ ಅಭಿಪ್ರಾಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅದು ಅವರ ಮುಂದಿನ ಚಿತ್ರಕ್ಕೆ ಬಿಸಿ ತಟ್ಟಿದೆ. ದೇಶ ವಿರೋಧಿ ಎಂದೆಲ್ಲ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಅಷ್ಟೇ ಅಲ್ಲದೆ “ಬಾಯ್ಕಾಟ್ ಫುಕ್ರೆ 3” ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಪ್ರಾರಂಭವಾಗಿದೆ.
ಫುಕ್ರೆ 3 ಗೆ ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಹಲವು ವಿಳಂಬ ಉಂಟಾಗಿ ಈ ಮಾರ್ಚ್‌ನಲ್ಲಿ ಪ್ರೊಡಕ್ಷನ್ ಕೆಲಸ ಆರಂಭವಾಗಿತ್ತು. ತಮ್ಮ ಬಹು ನಿರೀಕ್ಷಿತ ಚಲನಚಿತ್ರಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ರಿಚಾ ಕ್ಷಮೆ ಯಾಚಿಸಿದರು. “ಈ ರೀತಿ ಅಭಿಪ್ರಾಯ ನೀಡುವುದು ಎಂದಿಗೂ ನನ್ನ ಉದ್ದೇಶವಾಗಿರಲಿಲ್ಲ. ವಿವಾದಕ್ಕೆ ಎಳೆಯುತ್ತಿರುವ ಆ ಮೂರು ಪದಗಳಿಂದ ಯಾರಾದರೂ ಮನನೊಂದಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ”ಎಂದು ಅವರು ಹೇಳಿದ್ದಾರೆ.
https://twitter.com/Anju_Kaur100/status/1596002465907806208?ref_src=twsrc%5Etfw%7Ctwcamp%5Etweetembed%7Ctwterm%5E1596002465907806208%7Ctwgr%5E6a65668b7c7862bc8b9e57496179a9680b56955b%7Ctwcon%5Es1_&ref_url=https%3A%2F%2Fwww.news18.com%2Fbuzz%2Fboycott-fukrey-3-trends-after-richa-chadhas-galwan-tweet-sparks-outrage-on-twitter-6466621.html
https://twitter.com/IAMANJALI143/status/1596009167634198529?ref_src=twsrc%5Etfw%7Ctwcamp%5Etweetembed%7Ctwterm%5E1596009167634198529%7Ctwgr%5E6a65668b7c7862bc8b9e57496179a9680b56955b%7Ctwcon%5Es1_&ref_url=https%3A%2F%2Fwww.news18.com%2Fbuzz%2Fboycott-fukrey-3-trends-after-richa-chadhas-galwan-tweet-sparks-outrage-on-twitter-6466621.html