ಅಣ್ಣನೊಬ್ಬ ತನ್ನ ಮೊದಲ ಸಂಬಳದಿಂದ ತಮ್ಮನಿಗೆ ಜೊತೆ ಹೊಸ ಸ್ನೀಕರ್ಸ್ ಮತ್ತು ಸಾಕ್ಸ್‌ಗಳೊಂದಿಗೆ ಅಚ್ಚರಿಯನ್ನು ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ.
ಈ ವಿಡಿಯೋದಲ್ಲಿ ಬಾಲಕ ತನ್ನ ತಮ್ಮನ ಕೋಣೆ ಪ್ರವೇಶಿಸುವುದನ್ನು ಕಾಣಬಹುದು, ಅಲ್ಲಿ ಅವನು ಗಾಢ ನಿದ್ದೆಯಲ್ಲಿದ್ದ. ನಂತರ ಅವನು ತನ್ನ ಹಾಸಿಗೆಯ ಮೇಲೆ ಸ್ನೀಕರ್ಸ್ ಪೆಟ್ಟಿಗೆಯನ್ನು ಇಟ್ಟು ಅವನನ್ನು ಎಬ್ಬಿಸುತ್ತಾನೆ. ತಮ್ಮ ಎದ್ದಾಗ ಅಣ್ಣ ಪೆಟ್ಟಿಗೆಯನ್ನು ತೆರೆಯುತ್ತಾನೆ.
ತಮ್ಮ ಸ್ನೀಕರ್ಸ್ ನೋಡಿ ಕಣ್ಣೀರು ಹಾಕಿದ್ದಾನೆ. ಅವನು ಅಣ್ಣನನ್ನು ತಬ್ಬಿಕೊಳ್ಳಲು ಹಾಸಿಗೆಯಿಂದ ಜಿಗಿಯುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಗುಡ್‌ನ್ಯೂಸ್ ಮೂವ್‌ಮೆಂಟ್‌ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.
ಕೊಡುವ ಉಡುಗೊರೆಯ ಬೆಲೆ ಚಿಕ್ಕದ್ದಾಗಿರಬಹುದು. ಆದರೆ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಹಲವರು ಕಮೆಂಟ್ಮೂಲಕ ಹೇಳುತ್ತಿದ್ದಾರೆ.