ಸಾರ್ವಜನಿಕ ಸಾರಿಗೆ ಬಳಕೆಯಿಂದ ಇಂಧನದ ಖರ್ಚುಗಳಲ್ಲಿ ಭಾರೀ ಉಳಿತಾಯದೊಂದಿಗೆ ಪರಿಸರದ ಮೇಲೆ ಕಾಳಜಿ ಮೆರೆದಂತಾಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮೆಟ್ರೋ ರೈಲುಗಳ ಜಾಲಗಳಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆ ದಿನೇ ದಿನೇ ಹೆಚ್ಚುತಲೇ ಇದೆ.
ಮುಂಬೈ ಮೆಟ್ರೋದಲ್ಲಿ ಪರಯಣಿಸುವ ಬಾಲಕನೊಬ್ಬ ತನ್ನ ಮನೆಪಾಠದ ಸ್ಥಳ ತಲುಪಲು ಬೈಸಿಕಲ್ ಅನ್ನು ತನ್ನೊಂದಿಗೆ ಮೆಟ್ರೋದಲ್ಲೇ ಕೊಂಡೊಯ್ಯುತ್ತಾನೆ. ನಿವೃತ್ತ ಐಎಎಸ್ ಅಧಿಕಾರಿ ಆರ್.ಎ. ರಾಜೀವ್, ಹುಡುಗನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಮೆಟ್ರೋ ರೈಲಿನೊಳಗೆ ಬೈಸಿಕಲ್‌ಗೆ ಇರುವ ಸ್ಥಳದಲ್ಲಿ ಅದನ್ನು ಇಟ್ಟು, ಬೈಕ್ ಹೆಲ್ಮೆಟ್‌ಧಾರಿಯಾಗಿ ಕುಳಿತ ಬಾಲಕನ ಚಿತ್ರವನ್ನು ಈ ಟ್ವೀಟ್‌ನಲ್ಲಿ ನೋಡಬಹುದಾಗಿದೆ.
“ಮೆಟ್ರೋದಲ್ಲಿ ಪಯಣಿಸುವ ಅತ್ಯುತ್ತಮ ಮಾರ್ಗ ಮತ್ತು ಈತ ಕೊನೆ ಮೈಲಿಯ ಸಂಪರ್ಕವನ್ನು ಸೈಕಲ್ ಮೂಲಕ ಭಾರೀ ಜಾಣತನದಿಂದ ಮಾಡುತ್ತಿದ್ದಾನೆ. ಸಣ್ಣ ವಯಸ್ಸಿನ ಮಕ್ಕಳು ಹೆಲ್ಮೆಟ್ ಧರಿಸುವುದಿಲ್ಲ. ಆದರೆ ಈ ಬಾಲಕ ಸರಿಯಾದ ಹಾದಿಯಲ್ಲಿದ್ದಾನೆ. ಮೆಟ್ರೋ ಪದಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಮಾಡಲು ಇತರರನ್ನು ಪ್ರೇರೇಪಿಸಬೇಕು,” ಎಂದು ನಿವಾಸಿಗಳ ಸಂಘವೊಂದು ಈ ಟ್ವೀಟ್‌ಗೆ ಕಾಮೆಂಟ್ ಮಾಡಿದೆ.