alex Certify ಏಕಾಏಕಿ ರಸ್ತೆಗೆ ನುಗ್ಗಿದ ಮಗು: ಶರವೇಗದಲ್ಲಿ ಬಂದ ಲಾರಿ; ಕೂದಲೆಳೆ ಅಂತರದಲ್ಲಿ ಬಚಾವಾದ ಕಂದ | Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ರಸ್ತೆಗೆ ನುಗ್ಗಿದ ಮಗು: ಶರವೇಗದಲ್ಲಿ ಬಂದ ಲಾರಿ; ಕೂದಲೆಳೆ ಅಂತರದಲ್ಲಿ ಬಚಾವಾದ ಕಂದ | Video

ಪುಟ್ಟ ಮಕ್ಕಳ ಮೇಲೆ ತಂದೆ-ತಾಯಿ ಎಷ್ಟೇ ನಿಗಾ ವಹಿಸಿದರೂ ಕಡಿಮೆಯೇ. ಅರೇಕ್ಷಣ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಮಕ್ಕಳು ಅನಾಹುತಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಲ್ಲೋರ್ವ ಮಗು ಏಕಾಏಕಿ ರಸ್ತೆ ದಾಟಲು ಹೋಗಿ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಎದೆ ಝಲ್ ಎನಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಸ್ತೆ ಬದಿ ಅಪ್ಪ ಬೈಕ್ ನಲ್ಲಿ ಇನ್ನೋರ್ವ ಮಗಳನ್ನು ಹಿಂಬದಿ ಕೂರಿಸಿಕೊಳ್ಳುತ್ತಿದ್ದ ಈ ವೇಳೆ ಅಪ್ಪನ ಬೈಕ್ ಮುಂದೆ ನಿಂತಿದ್ದ ಪುಟ್ಟ ಮಗು ಸಡನ್ ಆಗಿ ರಸ್ತೆಯತ್ತ ನುಗ್ಗಿದೆ. ಇದೇ ವೇಳೆ ಶರವೇಗದಲ್ಲಿ ಲಾರಿಯೊಂದು ಬಂದಿದೆ….ಕ್ಷಣಾರ್ಧದಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದು ಕಂಗಾಲಾದ ತಂದೆಗೆ ಜೀವವೇ ಕೈಗೆಬಂದಂತಾಗಿದೆ. ತಕ್ಷಣ ಹಿಂದೆ ನೋಡುವಷ್ಟರಲ್ಲಿ ಮಗು ಪವಾಡದಂತೆ ಅಪಾಯದಿಂದ ಪಾರಾಗಿ ಬೈಕ್ ಬಳಿ ಬಂದಿದೆ. ಕೆಲವೇ ಕ್ಷಣಗಳ ಈ ವಿಡಿಯೋ ಹೃದಯದ ಬಡಿತವನ್ನೇ ನಿಲ್ಲಿಸುವಂತಿದೆ. ಆಯಸ್ಸು ಗಟ್ಟಿಯಿದ್ದರೆ ಸಾವನ್ನು ಗೆದ್ದು ಬರಬಹುದು ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಹಣೆಬರಹ ಚೆನ್ನಾಗಿದ್ದರೆ ವಿಧಿಗೂ ಕೂಡ ಹಿಂಜರಿಕೆಯಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...