ಕೊರೊನಾ ವೈರಸ್ ನಿಂದಾಗಿ ಇನ್ನೂ ಎಲ್ಲ ಕಡೆ ಶಾಲೆಗಳು ಶುರುವಾಗಿಲ್ಲ. ಆನ್ಲೈನ್ ನಲ್ಲಿಯೇ ಮಕ್ಕಳಿಗೆ ಪಾಠ ಹೇಳಲಾಗ್ತಿದೆ. ಮನೆಯಿಂದ ಹೊರ ಬೀಳದ ಮಕ್ಕಳು, ಮೊಬೈಲ್ ನಲ್ಲಿ ಪಾಠ ಕೇಳ್ತಿದ್ದಾರೆ. ಆನ್ಲೈನ್ ಶಿಕ್ಷಣ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಿದೆ. ಇಷ್ಟೇ ಅಲ್ಲ ಕೆಲ ಅನಾಹುತಗಳಿಗೆ ಕಾರಣವಾಗ್ತಿದೆ.
ವಿಯೆಟ್ನಾಂನಲ್ಲಿ ಆನ್ಲೈನ್ ಪಾಠ, ಬಾಲಕನ ಪ್ರಾಣ ತೆಗೆದಿದೆ. ಐದನೇ ತರಗತಿ ಓದುತ್ತಿದ್ದ ಬಾಲಕ ಮೊಬೈಲ್ ಸ್ಫೋಟಕ್ಕೆ ಬಲಿಯಾಗಿದ್ದಾನೆ. ನಾಲ್ಕು ಗಂಟೆ ಸುಮಾರಿಗೆ ಬಾಲಕ ಮೊಬೈಲ್ ನಲ್ಲಿ ಆನ್ಲೈನ್ ಕ್ಲಾಸ್ ಕೇಳುತ್ತಿದ್ದನಂತೆ. ಹೆಡ್ ಫೋನ್ ಹಾಕಿದ್ದ ಬಾಲಕ, ಮೊಬೈಲ್ ಚಾರ್ಜ್ ಗೆ ಹಾಕಿದ್ದ ಎನ್ನಲಾಗಿದೆ.
ಅಚಾನಕ್ ಮೊಬೈಲ್ ಸ್ಫೋಟಗೊಂಡಿದೆ. ಇದ್ರ ಶಬ್ಧ ಅಕ್ಕಪಕ್ಕದವರಿಗೆ ಕೇಳಿದೆ. ಅವರು ತಕ್ಷಣ ಅಲ್ಲಿಗೆ ಬಂದಿದ್ದಾರೆ. ಬಾಲಕನ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು ಎನ್ನಲಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಯಾವ ಮೊಬೈಲ್ ಸ್ಫೋಟಗೊಂಡಿದೆ ಹಾಗೂ ಯಾವ ಚಾರ್ಜರ್ ಬಳಸಿದ್ದ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.