
ಬಾಲಕನೊಬ್ಬ ಆಟವಾಡುತ್ತಿದ್ದಾಗ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಪಂಜಾಬ್ ನ ಜಲಂದರ್ ಉದ್ಯಾನವನದಲ್ಲಿಇ ನಡೆದಿದೆ.
ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ಬಾಲಕನಿಗೆ 66ಕೆವಿ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿದ್ದು, ಬಾಲಕ ಸುಟ್ಟು ಹೋಗಿದ್ದಾನೆ. ತಕ್ಷಣ ಆತನನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪಿದ್ದಾನೆ.
ಮೃತ ಬಾಲಕನನ್ನು ಆರವ್ ಎಂದು ಗುರುತಿಸಲಾಗಿದೆ. ಬಾಲಕ ಮೂರನೇ ತರಗತಿಯಲ್ಲಿ ಓದುತ್ತಿದ್ದ. ಉದ್ಯಾನವನದಲ್ಲಿ ಆಟವಾಡಲು ಬಂದಿದ್ದ ವೇಳೆ ದುರಂತ ಸಂಭವಿಸಿದೆ.