ಬೆಂಗಳೂರು: ಹುಟ್ಟುಹಬ್ಬದ ದಿನದಂದೇ ಭೀಕರ ಆಪಘಾತದಲ್ಲಿ 12 ವರ್ಷ ಬಾಲಕ ಸಾವನ್ನಪ್ಪಿರುವ ಘಟಬೆ ಬೆಂಗಳೂರಿನ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ನಡೆದಿದೆ.
ಭಾನುತೇಜ ಸಾವನ್ನಪ್ಪಿದ 12 ವರ್ಷದ ಬಾಲಕ. ಐಷರ್ ಟ್ರಕ್ ಬೈಕ್ ಹಿಂಬದಿಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ದುರಂತದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಬಾಲತ ಭಾನುತೇಜ ಆಂಧ್ರಪ್ರದೇಶದ ಚಿತ್ತೂರು ಮೂಲದ ರವಿ ಹಾಗೂ ಸುಮಾ ದಂಪತಿ ಪುತ್ರ. ಆರ್.ಟಿ.ನಗರದ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿಯಲು ಗುರುಗಳ ಜೊತೆ ವಾಸವಾಗಿದ್ದ.