ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ.
ಹೊಳೆಹೊನ್ನೂರು ಸಮೀಪದ ಅರಕೆರೆ ಗ್ರಾಮದ 4 ವರ್ಷದ ಧ್ರುವಂತ್ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಆಗಸ್ಟ್ 29 ರಂದು ಮನೆ ಬಳಿ ಆಟವಾಡುತ್ತಿದ್ದ ಬಾಲಕ ಅಡಿಕೆಗೆ ಹಾಲು ಬೇಯಿಸುವ ಹಂಡೆ ಸಮೀಪ ಕುರ್ಚಿ ಹಾಕಿಕೊಂಡು ಇಣುಕಿ ನೋಡುವಾಗ ಆಯತಪ್ಪಿ ಹಾಲು ಕುದಿಯುತ್ತಿದ್ದ ಹಂಡೆಗೆ ಬಿದ್ದಿದ್ದಾನೆ.
ತೀವ್ರ ಸುಟ್ಟಗಾಯಗಳಾಗಿದ್ದ ಬಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.