ಸುರಿಯುತ್ತಿರುವ ಧಾರಾಕಾರ ಮಳೆಗೆ ಎಲ್ಲೆಲ್ಲೂ ಹಾಹಾಕಾರ ಎದ್ದಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಅಣ್ಣತಂಗಿಯ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋ ನೋಡಿದರೆಲ್ಲರೂ ಭಾವುಕರಾಗಿದ್ದಾರೆ.
ಅಣ್ಣ ತಂಗಿಯ ಬಾಂಧವ್ಯ ಯಾವ ರೀತಿಯದ್ದಾಗಿರುತ್ತೆ ಅನ್ನೋದು ಎಲ್ಲರಿಗೂ ಚೆನ್ನಾಗಿ ಗೊತ್ತು. ಅಣ್ಣನಿಗೆ ತಂಗಿಯೇ ಪ್ರಪಂಚ ಆಗಿರುತ್ತಾಳೆ.
ತಂಗಿಗೂ ಅಣ್ಣನ ಸಾಥ್ ಇದ್ದರೆ ಸಾಕು ತಾನು ಸೇಫ್ ಅನ್ನೊ ಭಾವ ತನ್ನಿಂದ ತಾನೆ ಹುಟ್ಟಿಕೊಂಡಿರುತ್ತೆ. ಯಾವುದೇ ಸಮಸ್ಯೆ ಇದ್ದರೂ ಅಷ್ಟೆ ಅಣ್ಣ ಜೊತೆಗಿದ್ದರೆ ತಂಗಿಗೆ ಅದು ಯಾವ ದೊಡ್ಡ ಸಮಸ್ಯೆಯೇ ಅಲ್ಲ ಅನ್ನೋ ಭಾವ…… ಅದಕ್ಕೆ ಬೆಸ್ಟ್ ಎಗ್ಸಾಂಪಲ್ ಅನ್ನೋ ಹಾಗಿದೆ ಈ ವಿಡಿಯೋ.
BIG NEWS: ಮತ್ತೆ ಮಾಯಾಮೃಗ; ಅಕ್ಟೋಬರ್ ನಲ್ಲಿ ನಿಮ್ಮ ಮುಂದೆ; ಸಿಹಿ ಸುದ್ದಿ ನೀಡಿದ ಟಿ.ಎನ್. ಸೀತಾರಾಮ್
ಆ ಪುಟ್ಟ ಪೋರನ ವಯಸ್ಸು ಅಬ್ಬಬ್ಬಾ ಅಂದ್ರೆ 7-8 ವರ್ಷ ಇದ್ದಿರಬಹುದು. ಇನ್ನು ಆತನ ಜೊತೆ ಇದ್ದ ಆತನ ತಂಗಿ ವಯಸ್ಸು 4-5 ವರ್ಷ ಇರಬಹುದು. ಶಾಲೆ ಮುಗಿಸಿಕೊಂಡು ಬರ್ತಿದ್ದ ತಂಗಿಯನ್ನ ಆತ ರಸ್ತೆ ದಾಟಿಸಿದ ಪರಿಯೇ ಅದ್ಭುತವಾಗಿತ್ತು. ರಸ್ತೆ ಮಳೆಯ ನೀರಿನಿಂದ ತುಂಬಿಕೊಂಡಿತ್ತು. ಆ ಕೆಸರಿನ ನೀರಿನಲ್ಲಿ ತಂಗಿಗೆ ಕಾಲಿಡಲು ಬಿಡದೇ ತಾನೇ ಬೆನ್ನಿನ ಮೇಲೆ ಹೊತ್ತಿಕೊಂಡು ರಸ್ತೆ ದಾಟಿಸಿದ್ದ.
ವೈರಲ್ ಆಗಿರುವ ಈ ವಿಡಿಯೋವನ್ನ ಉಮ್ಡಾ ಪಂಕ್ತಿಯಾನ್ ಎಂಬುವರು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ಧಾರೆ.
26 ಸೆಕೆಂಡಿನ ಈ ವಿಡಿಯೋವನ್ನ ಈಗಾಗಲೇ 90 ಸಾವಿರ ಜನರು ವೀಕ್ಷಿಸಿದ್ದಾರೆ. ಹಾಗೆಯೇ ಸಾವಿರಾರು ಮುದ್ದು ಮುದ್ದಾದ ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ. ಅಣ್ಣ ತಂಗಿಯ ಈ ಕ್ಯೂಟ್ ಜೋಡಿ ನೆಟ್ಟಿಗರ ಹೃದಯ ಗೆದ್ದಿರೋದಂತೂ ಸತ್ಯ.
https://twitter.com/umda_panktiyan/status/1547023493518110722?ref_src=twsrc%5Etfw%7Ctwcamp%5Etweetembed%7Ctwterm%5E1547023493518110722%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Ftrending%2Fhuman-interest%2Fboy-crosses-waterlogged-street-with-little-sister-on-his-back-574646.html