ಕೆಲವೊಮ್ಮೆ ಸಂಬಂಧದ ಸುಳಿ ಮನುಷ್ಯನನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ವ್ಯಕ್ತಿಯೊಬ್ಬನ ಬಾಳಲ್ಲೂ ಸಂಬಂಧ ಸಮಸ್ಯೆಗೆ ಕಾರಣವಾಗಿದೆ.
ಪ್ರೀತಿಸಿ ಮದುವೆಯಾಗಬೇಕೆಂದುಕೊಂಡಿದ್ದ ಹುಡುಗಿ ತಾಯಿ ನೋಡಿ ದಂಗಾಗಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಹುಡುಗ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆ ಹುಡುಗ ಜಿಮ್ ಗೆ ಹೋಗ್ತಿದ್ದನಂತೆ. ಈ ವೇಳೆ 40 ವರ್ಷದ ಮಹಿಳೆಯ ಪರಿಚಯವಾಗಿತ್ತಂತೆ. 25 ವರ್ಷದ ಯುವತಿಯಂತೆ ಕಾಣ್ತಿದ್ದ ಮಹಿಳೆ ನಿಧಾನವಾಗಿ ಹತ್ತಿರವಾಗಿದ್ದಳಂತೆ. ಅನೇಕ ಬಾರಿ ಮಹಿಳೆ ಮನೆಗೆ ಕರೆದಿದ್ದಳಂತೆ. ಇಬ್ಬರೂ ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದರಂತೆ. ನಂತ್ರ ಮಹಿಳೆಗೆ ತನ್ನ ತಪ್ಪಿನ ಅರಿವಾಗಿದೆ. ವಯಸ್ಸಿನ ಅಂತರ ಹೇಳಿ ದೂರವಾಗಿದ್ದಾಳೆ.
ಒಂದು ವರ್ಷದ ನಂತ್ರ ಯುವಕ ಮತ್ತೊಂದು ಯುವತಿ ಪ್ರೀತಿಗೆ ಬಿದ್ದಿದ್ದಾನೆ. ಇಬ್ಬರ ಮಧ್ಯೆ ಗಾಢ ಸಂಬಂಧ ಬೆಳೆದಿದೆ. ಪಾಲಕರಿಗೆ ಬಾಯ್ ಫ್ರೆಂಡ್ ಪರಿಚಯ ಮಾಡಲು ಯುವತಿ ಮುಂದಾಗಿದ್ದಾಳೆ. ಯುವತಿ ಮನೆ ನೋಡಿ, ಯುವಕ ದಂಗಾಗಿದ್ದಾನೆ. ಒಳಗೆ ಹೋದಾಗ ಮತ್ತಷ್ಟು ಶಾಕ್ ಆಗಿದೆ. ಪ್ರೇಯಸಿ ತಾಯಿ ಹಿಂದೆ ಸಂಬಂಧ ಬೆಳೆಸಿದ್ದ ಮಹಿಳೆ ಎಂಬುದು ಗೊತ್ತಾಗಿದೆ. ಆದ್ರೆ ಮಹಿಳೆ ಈ ವಿಷ್ಯವನ್ನು ಬಾಯ್ಬಿಟ್ಟಿಲ್ಲವಂತೆ. ಒಂದು ವೇಳೆ ಈ ವಿಷ್ಯ ಹೇಳಿದ್ರೆ ನಿನ್ನ-ಮಗಳ ಹಾಗೂ ನನ್ನ-ಪತಿಯ ಸಂಬಂಧ ಹಾಳಾಗುತ್ತದೆ ಎಂದು ಫೋನ್ ಮಾಡಿ ತಿಳಿಸಿದ್ದಾಳಂತೆ. ಈ ವಿಷ್ಯವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.