ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪೋರ್ನ್ ಚಿತ್ರಗಳ ವಿರುದ್ಧ ಕಿಮ್ ಜಾಂಗ್ ಉನ್ ತಮ್ಮ ಯುದ್ಧವನ್ನು ತೀವ್ರಗೊಳಿಸಿದ್ದಾರೆ. ಹದಿಹರೆಯದ ಹುಡುಗ ಪೋರ್ನ್ ಚಿತ್ರ ವೀಕ್ಷಣೆ ಮಾಡಿದ ಕಾರಣಕ್ಕೆ ಆತ ಹಾಗೂ ಆತನ ಕುಟುಂಬಕ್ಕೆ ಕಿಮ್ ಜಾಂಗ್ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಪೋರ್ನ್ ವೆಬ್ಸೈಟ್ ರದ್ದು ಮಾಡಲಾಗಿದೆ. ಉತ್ತರ ಕೊರಿಯಾ ಈ ವಿಷ್ಯದಲ್ಲಿ ಇನ್ನಷ್ಟು ಕಠಿಣವಾಗಿದೆ. ಮನೆಯಲ್ಲಿ ಪಾಲಕರಿಲ್ಲದ ವೇಳೆ ರಾತ್ರಿ ಪೋರ್ನ್ ಚಿತ್ರಗಳನ್ನು ವೀಕ್ಷಣೆ ಮಾಡ್ತಿದ್ದ ಎನ್ನಲಾಗಿದೆ. ಇದು ತನಿಖಾ ತಂಡಕ್ಕೆ ಗೊತ್ತಾಗಿದೆ. ತಕ್ಷಣ ಆತನನ್ನು ಬಂಧಿಸಿದ್ದಾರೆ.
ಬಾಲಕ ಹಾಗೂ ಆತನ ಕುಟುಂಬವನ್ನು ಗಡಿಪಾರು ಮಾಡಲಾಗಿದೆ. ಉತ್ತರ ಕೊರಿಯಾದ ದೂರದ ಪ್ರದೇಶಕ್ಕೆ ಕಳುಹಿಸಲಾಗಿದೆ. ಕಿಮ್ ಜಾಂಗ್ ಹಿಂದಿನ ವರ್ಷ ಪೋರ್ನ್ ಚಿತ್ರಗಳ ವಿರುದ್ಧ ಅಭಿಯಾನ ಶುರು ಮಾಡಿದ್ದಾರೆ. ಉತ್ತರ ಕೊರಿಯಾದಲ್ಲಿ ಪೋರ್ನ್ ಚಿತ್ರಗಳ ವಿರುದ್ಧ ಕಾನೂನು ರಚಿಸಲಾಗಿದೆ. ಅಪರಾಧಿಗಳಿಗೆ ಐದು ವರ್ಷದಿಂದ 15 ವರ್ಷದವರೆಗೆ ಶಿಕ್ಷೆ ರೂಪದಲ್ಲಿ ಕಠಿಣ ಕೆಲಸ ಮಾಡಿಸಲಾಗುತ್ತದೆ.