ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿ ಇದ್ದು ನಂತರ ಮಗು ಜನನವಾಗುವುದು ಪ್ರಕೃತಿಯ ಸಹಜತೆ. ಒಂಬತ್ತು ತಿಂಗಳ ಅವಧಿಯ ಪೂರ್ವದಲ್ಲಿ ಜನಿಸಿದರೆ ಪ್ರೀ ಮೆಚ್ಯೂರ್ ಮಗು ಎಂದು ಕರೆಯುವುದುಂಟು. ಆದರೆ ಇಲ್ಲೊಂದು ಬಲು ಅಪರೂಪದ ಪ್ರೀಮೆಚ್ಯುರ್ ಮಗು ಜನಿಸಿದೆ.
ಯುಎಸ್‌ನ ಅಲಬಾಮಾದ್‌ನಲ್ಲಿ ಮಗುವೊಂದು 21 ವಾರ ಕಳೆಯುತ್ತಿದ್ದಂತೆ ಜನಿಸಿದೆ. ಅಂದರೆ 147 ದಿನಕ್ಕೆ ಜನಿಸಿದೆ. ಇದನ್ನೀಗ ವಿಶ್ವದ ಮೋಸ್ಟ್ ಪ್ರೀ ಮೆಚ್ಯುರ್ ಮಗು ಎಂದು ಕರೆಯಲಾಗಿದೆ. ಗಿನ್ನಿಸ್ ದಾಖಲೆ ಪುಸ್ತಕದಲ್ಲೂ ಸೇರಿದೆ.
ಜುಲೈ 2020ರಲ್ಲಿ 21 ವಾರ ಮತ್ತು 1 ದಿನದಲ್ಲಿ ಜನಿಸಿದಾಗ ಕರ್ಟಿಸ್ ಝೈ-ಕೀತ್ ಹೆಸರಿನ ಮಗು
420 ಗ್ರಾಂ ತೂಕವಿತ್ತು.
BIG NEWS: ದೇವೇಗೌಡರ ಕುಟುಂಬದ ಇನ್ನೊಂದು ಕುಡಿ ರಾಜಕೀಯಕ್ಕೆ ಎಂಟ್ರಿ…?
ಅಕಾಲಿಕವಾಗಿ ಜನಿಸಿದ ಮಗುವನ್ನು ಜೀವಂತವಾಗಿರಿಸಲು ಕೃತಕ ಉಸಿರಾಟದ ಬೆಂಬಲ ಮತ್ತು ಅವನ ಹೃದಯ ಮತ್ತು ಶ್ವಾಸಕೋಶಗಳಿಗೆ ವಿಶೇಷ ಔಷಧೋಪಚಾರ ನೀಡಲಾಗಿತ್ತು. ಈ ವರ್ಷ ಏಪ್ರಿಲ್ 6 ರಂದು ಮಗುವನ್ನು ಮನೆಗೆ ಕರೆದೊಯ್ಯಲು ಅವಕಾಶ ನೀಡಲಾಯಿತು.
ಮಿಚೆಲ್ ಚೆಲ್ಲಿ ಬಟ್ಲರ್ ಅವರ ಗರ್ಭಧಾರಣೆಯು ಉತ್ತಮವಾಗಿತ್ತು, ಆದರೆ ಕಳೆದ ವರ್ಷ ಜುಲೈ 4 ರಂದು ತುರ್ತು ಶಸ್ತ್ರಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ತನ್ನ ಸ್ಥಳೀಯ ಆಸ್ಪತ್ರೆಯಿಂದ ಬರ್ಮಿಂಗ್ಹ್ಯಾಮ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರಿಸಲಾಯಿತು.
ಚೆಲ್ಲಿ ತನ್ನ ಮಗುವಿನ ಜನ್ಮಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಜುಲೈ 5 ರಂದು ಮಧ್ಯಾಹ್ನ 1 ಗಂಟೆಗೆ ಅವರು 21 ವಾರಗಳ 1 ದಿನ (148 ದಿನಗಳು) ಗರ್ಭಾವಸ್ಥೆಯ ವಯಸ್ಸಿನಲ್ಲಿ ಕರ್ಟಿಸ್‌ಗೆ ಜನ್ಮ ನೀಡಿದರು. ಈ ಮೂಲಕ ಸುಮಾರು 19 ವಾರಗಳ ಅವಧಿಗೆ ಮುಂಚಿತವಾಗಿ ಜನಿಸಿತು.
ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಶಿಶುಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ವೈದ್ಯರು ಹೇಳಿದರು. ಇದು ತುಂಬಾ ಒತ್ತಡದಿಂದ ಕೂಡಿದ ಸಂದರ್ಭ ಎಂದು ಚೆಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ತಿಳಿಸಿದ್ದಾರೆ.
ಮಗು ಬದುಕುಳಿಯುತ್ತದೆಯೋ ಎಂದು ತಿಳಿದಿರಲಿಲ್ಲ, ಆದ್ದರಿಂದ ಪ್ರಾರ್ಥನೆಯನ್ನು ಮುಂದುವರಿಸಲು ನನಗೆ ವೈದ್ಯರು ಹೇಳಿದ್ದರು ಎಂದು ಅವರು ಹೇಳಿದರು.
ಯುಎಬಿ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಡಾ ಬ್ರಿಯಾನ್ ಸಿಮ್ಸ್ ಪ್ರಕಾರ, ಈ ವಯಸ್ಸಿನ ಶಿಶುಗಳು ಬದುಕುಳಿಯುವುದಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ ಎಂದಿದ್ದಾರೆ.
ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 275 ದಿನಗಳನ್ನು ಕಳೆದ ನಂತರ, ಕರ್ಟಿಸ್‌ಗೆ ಈ ವರ್ಷದ ಏಪ್ರಿಲ್ 6 ರಂದು ಮನೆಗೆ ಹೋಗಲು ಅವಕಾಶ ನೀಡಲಾಯಿತು.