ರಾಯಚೂರು: ಶಾಲೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಬಾಲಕ ಗುಂಡು ಸೂಜಿ ನುಂಗಿದ್ದು, ಶ್ವಾಸಕೋಶದೊಳಗೆ ಸೇರಿಕೊಂಡಿದ್ದ ಗುಂಡು ಸುಜಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಬ್ರಾಂಕೋಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾರೆ.
13 ವರ್ಷದ ಶಿವಕುಮಾರ ಪ್ರಾಣಾಪಾಯದಿಂದ ಪಾರಾದ ಬಾಲಕ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚಳ ಕ್ಯಾಂಪ್ ನ ಶಿವಕುಮಾರ ಶಾಲೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಸೂಜಿ ನುಂಗಿದ್ದು, ಶ್ವಾಸಕೋಶದೊಳಗೆ ಸೇರಿಕೊಂಡಿದೆ.
ವೈದ್ಯರು ತಪಾಸಣೆ ನಡೆಸಿದಾಗ ಗುಂಡು ಸೂಜಿ ಇರುವುದು ದೃಢಪಟ್ಟಿದ್ದು, ಶಸ್ತ್ರಚಿಕಿತ್ಸೆ ಮೂಲಕ ಸೂಜಿಯನ್ನು ಹೊರತೆಗೆಯಲಾಗಿದೆ. ವೈದ್ಯರಾದ ಡಾ. ಅರವಿಂದ ಸಂಗಾವಿ, ಡಾ. ಕಿರಣ ನಾಯಕ, ಡಾ. ಮಲ್ಲಿಕಾರ್ಜುನ, ಡಾ. ಸಿಂಧು, ಡಾ. ಇಂದುಮತಿ, ತಾಂತ್ರಿಕ ಸಿಬ್ಬಂದಿ ಅಮರೇಶ, ಲಿಂಗರಾಜ್ ಸಮುನ್ ಕ್ಲ್ಯಾರಿ, ನಾರಾಯಣ, ಶಂಕರ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.